ಐಪಿಎಲ್ ಫ್ಯಾನ್ಸ್’ಗೆ ಶೀಘ್ರವೇ ಸಿಗಲಿದೆ ಗುಡ್ ನ್ಯೂಸ್!

Promotion

ಬೆಂಗಳೂರು, ಜುಲೈ 16, 2020 (www.justkannada.in): ಶೀಘ್ರವೇ ಐಪಿಎಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮುಂದಿನ ಸಾಮಾನ್ಯ ಸಭೆಯಲ್ಲಿ ಅಕ್ಟೋಬರ್ ನಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ರದ್ದು ಮಾಡುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.

ಇದೇ ಸಮಯವನ್ನು ಬಿಸಿಸಿಐ ಐಪಿಎಲ್ ಗೆ ಬಳಸಲು ಯೋಜನೆ ಹಾಕಿಕೊಂಡಿದೆ. ಹೀಗಾಗಿ ವಿದೇಶದಲ್ಲಾದರೂ ಸರಿಯೇ ಐಪಿಎಲ್ ನಡೆಸಲು ಬಿಸಿಸಿಐ ತಯಾರಿ ನಡೆಸಿದೆ. ಈ ಮೂಲಕ ಈ ವರ್ಷ ಐಪಿಎಲ್ ಯಾವಾಗ ನಡೆಯುತ್ತದೋ ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ಸದ್ಯದಲ್ಲೇ ಗುಡ್ ನ್ಯೂಸ್ ಶೀಘ್ರದಲ್ಲೇ ಸಿಗಲಿದೆ.