RRR ಚಿತ್ರತಂಡದಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್

ಬೆಂಗಳೂರು, ಜುಲೈ 01, 2021 (www.justkannada.in): RRR ಚಿತ್ರತಂಡ ಇದೀಗ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದೆ.

ಬಾಹುಬಲಿ 2 ಬಳಿಕ ರಾಜಮೌಳಿ 2018ರಲ್ಲಿ RRR​ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಹೀಗಾಗಿ ಯಾವಾಗ ಚಿತ್ರ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕಾದಿದ್ದರು.

ಈ ಕುರಿತು ಚಿತ್ರತಂಡ ಮಾಹಿತಿಯೊಂದನ್ನು ಹಂಚಿಕೊಂಡಿದೆ. 2021ರಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.

ಚಿತ್ರದ ಇಬ್ಬರು ನಾಯಕರಾದ ರಾಮ್​ ಚರಣ್​ ಹಾಗೂ ಜೂನಿಯರ್​ ಎನ್​ಟಿಆರ್​ ಹೊಸ ಪೋಸ್ಟರ್​ನ್ನ ಕೂಡ ರಿಲೀಸ್ ಮಾಡಿದ್ದಾರೆ.

ಈಗಾಗಲೇ ಸಿನಿಮಾದ ಚಿತ್ರೀಕರಣ ಬಹುತೇಕ ಕಂಪ್ಲೀಟ್​ ಆಗಿದ್ದು, ಕೇವಲ 2 ಹಾಡುಗಷ್ಟೇ ಬಾಕಿಯಿವೆ. ಈಗಾಗಲೇ ನಾಯಕರಿಬ್ಬರೂ ಡಬ್ಬಿಂಗ್​ ಕೂಡ ಮುಗಿದಿದೆ.