ಧ್ರುವ ಸರ್ಜಾ ಫ್ಯಾನ್ಸ್’ಗೆ ಗುಡ್ ನ್ಯೂಸ್: ಆ್ಯಕ್ಸನ್ ದೃಶ್ಯಗಳ ಚಿತ್ರೀಕರಣ ಶೀಘ್ರ

Promotion

ಬೆಂಗಳೂರು, ಆಗಸ್ಟ್ 03, 2022 (www.justkannada.in): ಎ.ಪಿ.ಅರ್ಜುನ್ ಹಾಗೂ ಧ್ರುವ ಸರ್ಜಾ ಜೋಡಿಯ ‘ಮಾರ್ಟಿನ್’ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬ ಕುತೂಹಲ ಮೂಡಿದೆ.

ಅಂದಹಾಗೆ ಇಷ್ಟು ದಿನ ‘ಮಾರ್ಟಿನ್’ ಸಿನಿಮಾದ ಬಗ್ಗೆ ಯಾವುದೇ ಹೆಚ್ಚಿನ ಅಪ್ಡೇಟ್ ಬಂದಿರಲಿಲ್ಲ. ಧ್ರುವ ಅಭಿಮಾನಿಗಳು ‘ಮಾರ್ಟಿನ್’ ಅಪ್ಡೇಟ್‌ಗಾಗಿ ಕಾಯ್ತಿದ್ದಾರೆ.

ಸದ್ಯ ಚಿತ್ರತಂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ. ಚಿತ್ರದ ಬಹುತೇಕ ಶೂಟಿಂಗ್ ಮುಗಿದೆ. ಇನ್ನೂ ಆಯಕ್ಷನ್ ದೃಶ್ಯಗಳು ಮಾತ್ರವೇ ಬಾಕಿ ಇದೆ. ಮುಂದಿನ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ.

ಆಯಕ್ಷನ್ ಸೀಕ್ವೆಲ್‌ಗಾಗಿ ನಟ ಧ್ರುವ ಸರ್ಜಾ ಭರ್ಜರಿ ತಯಾರಿ ನಡೆಸಿದ್ದಾರೆ. ಇದೇ ಆಗಸ್ಟ್ 5ರಿಂದ ಸಿನಿಮಾದ ಆಯಕ್ಷನ್ ಚಿತ್ರೀಕರಣ ಶುರುವಾಗಲಿದೆ.

ಸೆಪ್ಟೆಂಬರ್ 30ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಈಗಾಗಲೇ ‘ಮಾರ್ಟಿನ್’ ತಂಡ ಪ್ರಕಟ ಮಾಡಿದೆ. ಆದರೆ ಚಿತ್ರದ ಶೂಟಿಂಗ್ ಇನ್ನು ಬಾಕಿ ಇರುವುದರಿಂದ ಸಿನಿಮಾವನ್ನು ಸೆಪ್ಟೆಂಬರ್‌ನಲ್ಲಿ ರಿಲೀಸ್ ಮಾಡುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ.