ಮದುವೆಯಾಗಿ ಎರಡು ವರ್ಷದ ಬಳಿಕ ಸಮಂತಾ-ನಾಗಚೈತನ್ಯಗೆ ಗುಡ್ ನ್ಯೂಸ್ !

ಬೆಂಗಳೂರು, ಸೆಪ್ಟೆಂಬರ್ 14, 2019 (www.justkannada.in): ನಟಿ ಸಮಂತಾ ಅಕ್ಕಿನೇನಿ ಹಾಗೂ ನಟ ನಾಗ ಚೈತನ್ಯ ಮದುವೆಯಾಗಿ ಎರಡು ವರ್ಷಗಳ ಬಳಿಕ ಅವರು ಸಿಹಿ ಸುದ್ದಿ ನೀಡುತ್ತಿದ್ದಾರೆ!

ಸಮಂತಾ ಶೀಘ್ರವೇ ತಾಯಿ ಆಗಲಿದ್ದಾರೆ ಎನ್ನುವ ವಿಚಾರ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಸಮಂತಾ ಕೈಯಲ್ಲಿ ಈಗ ಇರುವುದು ಒಂದು ಸಿನಿಮಾ ಮಾತ್ರ.

ತಮಿಳಿನಲ್ಲಿ ತೆರೆಕಂಡು ಹಿಟ್​ ಆಗಿದ್ದ ’96’ ಚಿತ್ರ ತೆಲುಗಿಗೆ ರಿಮೇಕ್​ ಆಗುತ್ತಿದ್ದು, ಈ ಸಿನಿಮಾಗೆ ಸಮಂತಾ ನಾಯಕಿ. ವಿದೇಶಿ ಪ್ರಯಾಣ ಮುಗಿಸಿ ಬಂದಿರುವ ಸಮಂತಾ ಈ ಚಿತ್ರದ ಶೂಟಿಂಗ್​​ಅನ್ನು ಶೀಘ್ರವೇ ಪೂರ್ಣಗೊಳಿಸಿ ಎಂದು ನಿರ್ದೇಶಕರ ಬಳಿ ಕೋರಿದ್ದಾರೆ. ಇದು ಸಮಂತಾ ತಾಯಿ ಆಗುತ್ತಿದ್ದಾರೆ ಎನ್ನುವ ವಿಷಯಕ್ಕೆ ಸಾಕಷ್ಟು ಪುಷ್ಟಿ ನೀಡಿದೆ.