ದೃಷ್ಟಿ ವಿಶೇಷಚೇತನೆಗೆ ಚಿನ್ನದ ಪದಕ.

kannada t-shirts

ಮೈಸೂರು,ಸೆಪ್ಟಂಬರ್,7,2021(www.justkannada.in):  ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಅಂಡಿತವಳ್ಳಿ ಗ್ರಾಮದ ದೃಷ್ಟಿ ವಿಶೇಷ ಚೇತನೆ ಲತಾ ಎಚ್.ಎನ್. ಅವರು ಎಂಎ ಕನ್ನಡದ ವಿಷಯದಲ್ಲಿ ಒಂದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಮೂಲತಃ ಕೃಷಿಕರಾದ ನಾಗರಾಜು, ರಾಧಾ ದಂಪತಿ ಪುತ್ರಿಯಾದ ಲತಾ ಅವರು ಬಾಲ್ಯದಲ್ಲೇ ದೃಷ್ಟಿ ಕಳೆದುಕೊಂಡರು. ಆದರೂ ಛಲ ಬಿಡದೆ ಓದಿ ಇದೀಗ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮಹಾರಾಣಿ ಕಾಲೇಜಿನಲ್ಲಿ ಬಿಎ ಮುಗಿಸಿ ನಂತರ ಮಾನಸಗಂಗೋತ್ರಿಯಲ್ಲಿ ಎಂಎ ಕನ್ನಡಕ್ಕೆ ಸೇರಿಕೊಂಡರು.

ನನಗೆ ಪ್ರಾಧ್ಯಾಪಕಿ ಆಗಬೇಕೆಂಬ ಕನಸು ಇದೆ. ಚಿಕ್ಕ ವಯಸ್ಸಿನಿಂದಲೂ ಲೆಕ್ಚರ್ ಆಗುವ ಗುರಿ ಇಟ್ಟುಕೊಂಡಿದ್ದೇನೆ. ಮುಂದೆ ಎನ್ ಇಟಿ ಮುಗಿಸಿ ಪಿಎಚ್.ಡಿ ಮಾಡಿ ಪ್ರಾಧ್ಯಾಪಕಿ ವೃತ್ತಿ ಜೀವನ ಆರಂಭಿಸುವ ಕನಸು ಇಟ್ಟುಕೊಂಡಿದ್ದೇನೆ ಎಂದು ಲತಾ ಅವರು ತಿಳಿಸಿದ್ದಾರೆ.

ENGLISH SUMMARY…

Visually impaired girl earns academic gold medal
Mysuru, September 7, 2021 (www.justkannada.in): A visually impaired girl named Latha H.N., resident of Ravanduru Anditavalli Village in Periyapatna Taluk has earned a gold medal in Kannada.
Latha is the daughter of Nagaraju and Radha couple, who are agriculturists by profession. Latha lost her vision in her childhood itself. But she didn’t lose her heart and desire to study. Her hard work and commitment have earned her a gold medal. After completing BA at the Maharani’s College in Mysuru, she joined MA Kannada at the Manasgangotri.
It was her dream to become a lecturer. She intends to complete NET and Ph.D. and become a professor in the future. She received her post-graduation certificate and the medal at the 101st Convocation held at Crawford Hall today.
Keywords: University of Mysore/ 101st Convocation/ Latha/ visually impaired/ gold medal/MA in Kannada

Key words: Gold Medal – mysore –university-101st  convocation

website developers in mysore