ಗೋ ಹತ್ಯೆ ನಿಷೇಧ ರಾಜ್ಯದಲ್ಲೇ ಏಕೆ…?- ಮಾಜಿ ಸಚಿವ ಯು.ಟಿ ಖಾದರ್ ಪ್ರಶ್ನೆ…

ಬೆಂಗಳೂರು, ಡಿಸೆಂಬರ್ 7,2020(www.justkannada.in):   ಕೇರಳಾ, ಅಸ್ಸಾಂ, ಮಿಜೋರಾಂನಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಇಲ್ಲ ಆದರೇ ಗೋ ಹತ್ಯೆ ನಿಷೇಧ ರಾಜ್ಯದಲ್ಲೇ ಏಕೆ…? ಎಂದು ಮಾಜಿ ಸಚಿವ ಯುಟಿ ಖಾದರ್ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಯುಟಿ ಖಾದರ್, ಕೇರಳಾ, ಅಸ್ಸಾಂ, ಮಿಜೋರಾಂನಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಇಲ್ಲ.  ಅಲ್ಲೆಲ್ಲಾ ತಿನ್ನಲು ಬಿಟ್ಟು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದಾರೆ.  ಪ್ರಧಾನಿ ಮೋದಿ ಒನ್ ನೇಷನ್ ಅಂತಾರೇ ಆಗಾದರೇ ಒಂದೇ ಕಾನೂನು ತರಲಿ ಎಂದು ಕಿಡಿಕಾರಿದರು.go-killing-ban-state-former-minister-ut-khadar

ರಾಜ್ಯದಲ್ಲಿ  ಜನರಿಗೆ ರೇಷನ್ ಕಾರ್ಡ್ ಸಿಗುತ್ತಿಲ್ಲ.  ಪರಿಹಾರವೂ ಸಿಗುತ್ತಿಲ್ಲ ರಾಜ್ಯ ಸರ್ಕಾರ ಉದ್ಯೋಗ ಸೃಷ್ಠಿಸುವಲ್ಲಿ ವಿಫಲವಾಗಿದೆ.  ಸರಿಯಾಗಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲು ಸರ್ಕಾರಕ್ಕೆ ಆಗುತ್ತಿಲ್ಲ.  ಪಿಹೆಚ್ ಡಿವಿದ್ಯಾರ್ಥಿಗಳಿಗೆ ಸಾಲವನ್ನೂ ನೀಡುತ್ತಿಲ್ಲ. ಇನ್ನಾದರೂ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯೋಚಿಸಲಿ ಎಂದು ಯುಟಿ ಖಾದರ್ ವಾಗ್ದಾಳಿ ನಡೆಸಿದರು.

Key words: Go Killing Ban – State-Former Minister -UT Khadar.