ವಿಶ್ವಾಸಮತಯಾಚನೆ ಮೇಲಿನ ಚರ್ಚೆಗೆ ಇನ್ನೆರೆಡು ದಿನ ಅವಕಾಶ ನೀಡಿ: ಸಿಎಂ ನಿಯೋಗದ ಮನವಿಗೆ ಸ್ಪೀಕರ್ ಕೊಟ್ಟ ಉತ್ತರವೇನು ಗೊತ್ತೆ..?

ಬೆಂಗಳೂರು,ಜು,22,2019(www.justkannada.in): ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ನಿಯೋಗ ಇಂದು ಸ್ಪೀಕರ್ ಭೇಟಿಯಾಗಿ ವಿಶ್ವಾಸಮತಯಾಚನೆ ಮೇಲಿನ ಚರ್ಚೆಗೆ ಮತ್ತೆರಡು ದಿನ ಸಮಯಾವಕಾಶ ನೀಡುವಂತೆ ಮನವಿ ಮಾಡಿದರು.

ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತು ಹೆಚ್.ಡಿ ರೇವಣ್ಣ ಅವರು ಇಂದು ಸ್ಪೀಕರ್ ರಮೇಶ್ ಕುಮಾರ್ ಅವನ್ನ ಭೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ವಿಶ್ವಾಸಮತಯಾಚನೆ ಮೇಲಿನ ಚರ್ಚೆಗೆ ಇನ್ನೆರೆಡು ದಿನ ಕಾಲಾವಕಾಶ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ.

ಆದರೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮನವಿಗೆ ಉತ್ತರ ನೀಡಿದ ಸ್ಪೀಕರ್ ರಮೇಶ್ ಕುಮಾರ್, ವಿಶ್ವಾಸಮತಯಾಚನೆ ವಿಳಂಬ ಮಾಡಲು ಸಾಧ್ಯವಿಲ್ಲ. ಸದನದಲ್ಲೇ ನಾನು  ವಿಶ್ವಾಸ ಮತಯಾಚನೆ ಸೋಮವಾರ ಮುಗಿಸುವುದಾಗಿ ಹೇಳಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ  ಎನ್ನಲಾಗಿದೆ.

ಕಳೆದ ಗುರುವಾರ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಪ್ರಸ್ತಾಪ ಮಂಡಿಸಿದ್ದರು. ಆದರೆ ದೋಸ್ತಿ ಪಕ್ಷದ ಸದಸ್ಯರು ಎರಡು ದಿನ ವಿಶ್ವಾಸಮತಯಾಚನೆ ಮೇಲೆ ಚರ್ಚೆ ನಡೆಸಿದ್ದರು. ಇದೀಗ ಇಂದು ಸಹ ಚರ್ಚೆ ಮುಂದುವರೆಯುವ ಸಾಧ್ಯತೆ ಇದೆ.

Key words: Give –debate- two days- request – CM hd kumaraswamy