‘ಪ್ರೇಮಂ ಪೂಜ್ಯಂ’ ಪಾರ್ಟ್ 2ಗೆ ಸಿದ್ಧತೆ ಶುರು ! ಹೊಸ ಯೋಜನೆ ರೂಪಿಸಿದ್ದಾರೆ ನೆನಪಿರಲಿ ಪ್ರೇಮ್ !

ಬೆಂಗಳೂರು, ಡಿಸೆಂಬರ್ 12, 2021 (www.justkannada.in): 2022ರ ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ‘ಪ್ರೇಮಂ ಪೂಜ್ಯಂ’ ಪಾರ್ಟ್ 2ಗೆ ಚಾಲನೆ ನೀಡಲು ಚಿತ್ರತಂಡ ಮುಂದಾಗಿದೆ

ಫೆ.14ಕ್ಕೆ ‘ಪ್ರೇಮಂ ಪೂಜ್ಯಂ’ ಸಿನಿಮಾ ಶತದಿನವನ್ನು ಪೂರೈಸಲಿದೆ. ಹೀಗಾಗಿ ಚಿತ್ರತಂಡ ಅಂದೇ ಭಾಗ-2ರ ಶೂಟಿಂಗ್ ಆರಂಭಿಸಲು ಪ್ಲಾನ್ ಮಾಡಿದೆ.

ಚಿತ್ರದಲ್ಲಿ ನೆನಪಿರಲಿ ಪ್ರೇಮ್ ವೈದ್ಯಕೀಯ ವಿದ್ಯಾರ್ಥಿಯಾಗಿ ನಟಿಸಿದ್ದರೆ, ಬೃಂದಾ ಆಚಾರ್ಯ, ಐಂದ್ರಿತಾರೇ ನಟನೆಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದರು.

ಈ ಚಿತ್ರದ ಮೂಲಕ ನೆನಪಿರಲಿ ಪ್ರೇಮ್ ಹಾಗೂ ನಿರ್ದೇಶಕ ಡಾ ಬಿ ಎಸ್ ರಾಘವೇಂದ್ರ ಜೋಡಿ ಮತ್ತೆ ಒಂದಾಗುತ್ತಿದೆ.

‘ಪ್ರೇಮಂ ಪೂಜ್ಯಂ 2’ ಸೆಟ್ಟೇರಿಸಲು ನಿರ್ದೇಶಕ ರಾಘವೇಂದ್ರ ಸಜ್ಜಾಗಿದ್ದು, ಇದಕ್ಕೆ ಬೇಕಾಗಿರುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.