ಕ್ರಿಕೆಟ್ ಲೋಕದಲ್ಲಿ ಲಿಂಗ-ಸಮಾನತೆ: ಬ್ಯಾಟ್ಸ್’ಮನ್ ಅಲ್ಲ ಇನ್ನು ಮುಂದೆ ಬ್ಯಾಟರ್ !

kannada t-shirts

ಬೆಂಗಳೂರು, ಸೆಪ್ಟೆಂಬರ್ 23, 2021 (www.justkannada.in): ಕ್ರಿಕೆಟ್ ಲೋಕದಲ್ಲಿ ಹೊಸದೊಂದು ಬದಲಾವಣೆಯಾಗುತ್ತಿದೆ! ಲಿಂಗಸಮಾನತೆ ಸೂಚಿಸುವ ಬ್ಯಾಟರ್ ಪದಬಳಕೆ ಸಂಬಂಧ ಹೊಸ ನಿಯಮ ರೂಪಿಸಲಾಗಿದೆ.

ಕ್ರಿಕೆಟ್‌ನಲ್ಲಿ ‘ಬ್ಯಾಟ್ಸ್‌ಮನ್’ ಎಂಬ ಪದಬಳಕೆ ಬದಲು ‘ಬ್ಯಾಟರ್’ ಎಂಬ ಪದ ಇನ್ನುಮುಂದೆ ಬಳಕೆಯಾಗಲಿದೆ ಎಂದು ರಿಲ್‌ಬಾರ್ನ್ ಕ್ರಿಕೆಟ್ ಕ್ಲಬ್ ತಿಳಿಸಿದೆ.

ಬ್ಯಾಟಿಂಗ್ ಮಾಡುವ ಮಹಿಳೆಯರನ್ನು ಸೂಚಿಸಲು ಸೂಕ್ತ ಪದ ಜಾರಿಯಲ್ಲಿರಲಿಲ್ಲ. ಮಹಿಳಾ ಕ್ರಿಕೆಟ್‌ನಲ್ಲಿ ಬ್ಯಾಟರ್ ಎಂಬ ಪದ ಜಾರಿಯಲ್ಲಿದ್ದರೂ ಬ್ಯಾಟ್ಸ್‌ಮನ್ ಎನ್ನುವ ಪದಕ್ಕೆ ಹೆಚ್ಚಿನ ಮನ್ನಣೆ ಸಿಗುತ್ತಿತ್ತು.

ಹೀಗಾಗಿ ಇನ್ನು ಮುಂದೆ ಮಹಿಳಾ ಹಾಗೂ ಪುರುಷರಿಗಾಗಿ ಒಂದೇ ಪದಬಳಕೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ನಿಯಮವನ್ನು ತಕ್ಷಣದಿಂದಲೇ ಜಾರಿ ಮಾಡಲು ಮೆರಿಲ್‌ಬಾರ್ನ್ ಕ್ರಿಕೆಟ್ ಕ್ಲಬ್ ಪ್ರಕಟಿಸಿದೆ.

key word: Gender-Equality in the Cricket World, not Batman’s, now its Batter!

website developers in mysore