ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ತಲೆದಂಡದಿಂದ ಬಚಾವಾದ ಮೈಸೂರು ಪೋಲಿಸರು.

kannada t-shirts

ಮೈಸೂರು,ಆಗಸ್ಟ್,31,2021(www.justkannada.in): ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಹಾಗೂ ಕ್ರೈಂ ರೇಟ್ ಹೆಚ್ಚಳ ಹಿನ್ನೆಲೆಯಲ್ಲಿ  ಪೊಲೀಸರ ತಲೆದಂಡವಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಮೈಸೂರು ಪೊಲೀಸರು ಇದರಿಂದ ಬಚಾವಾಗಿದ್ದಾರೆ.

ಹೌದು, ಈ ಕುರಿತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ಯಾರ ತಲೆದಂಡವೂ ಇಲ್ಲ. ಪ್ರಕರಣವನ್ನ ಮೈಸೂರು ಪೋಲಿಸರು ಬಹುಬೇಗ ಭೇದಿಸಿದ್ದಾರೆ. ಹೀಗಾಗಿ ತಲೆದಂಡದ ಅವಶ್ಯಕತೆ ಇಲ್ಲ. ಆದರೆ ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಕಠಿಣ ಕ್ರಮ ವಹಿಸಲು ಸೂಚಿಸುತ್ತೆನೆ. ಮುಂದೆ ಇಂತಹ ಪ್ರಕರಣ ನಡೆದರೆ ಕ್ರಮ ನಿಶ್ಚಿತ. ಈ ಬಗ್ಗೆ ಇಂದು ಪೋಲಿಸ್ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡುತ್ತೇನೆ ಎಂದಿದ್ದಾರೆ.

ಗ್ಯಾಂಗ್‌ ರೇಪ್  ಪ್ರಕರಣದ ಆರೋಪಿಗಳಿಗೆ ಕೃತ್ಯ ಎಸಗಲು ಮೈಸೂರು ಕೇಂದ್ರ ಸ್ಥಾನ ಎಂದು ವರದಿಯಾಗಿದೆ. ಇದನ್ನ ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ತಮಿಳುನಾಡಿನ ಪುಂಡ‌ ಪೋಕರಿಗಳು ಇಷ್ಟು ಸುಲಭವಾಗಿ ಮೈಸೂರಿಗೆ ಬಂದು ಕ್ರೈಂ ಮಾಡಿ ಹೋಗ್ತಾರೆ ಏನರ್ಥ.ಈ ಬಗ್ಗೆ ಕಠಿಣ ಕ್ರಮಗಳು ಅನಿವಾರ್ಯ.ಇವತ್ತಿನ ಪೊಲೀಸರ ಸಭೆಯಲ್ಲಿ  ಈ ವಿಚಾರದ ಬಗ್ಗೆ ವಿಸ್ತೃತ ಚರ್ಚೆ ಮಾಡ್ತೇನೆ. ಅಪರಾಧ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಮೈಸೂರು ದಸರಾ ಸಂಬಂಧ ಸೆ.8ರಂದು ಸಭೆ.

2021 ಮೈಸೂರು ದಸರಾ ಹಿನ್ನಲೆ ಸೆಪ್ಟೆಂಬರ್ 3 ರಂದು ಬೆಂಗಳೂರಿನಲ್ಲಿ ಹೈಪವರ್ ಕಮಿಟಿಯ ಮೊದಲ ಸಭೆ ನಡೆಯಲಿದೆ. ನಂತರ ಸೆಪ್ಟೆಂಬರ್ 8 ರಂದು ಮೈಸೂರಿನಲ್ಲಿ ಅದರ ಮುಂದುವರಿದ ಸಭೆ ನಡೆಸುತ್ತೇನೆ. ದಸರಾದ ಪ್ರಮುಖ ರೂಪುರೇಷಗಳನ್ನು ಸಿದ್ದ ಮಾಡುತ್ತೇವೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.

ENGLISH SUMMARY…

Mysuru gang rape case: Mysuru police escape from getting dimissed
Mysuru, August 31, 2021 (www.justkannada.in): Rumours were going on that a few police personnel in Mysuru would lose their jobs following the gang rape case that occurred in Mysuru recently. However, the Mysuru police have escaped from it.
Speaking in Mysuru, District In-charge Minister S.T. Somashekar clarified that no police personnel would be dismissed or suspended. He appreciated the Mysuru city police for cracking the case so soon and hence there was no need for dismissal. At the same, he also advised the Mysuru police to be careful and prevent such cases in the future. He also warned them that stringent action would be taken in case if such incidents recur.
Minister S.T. Somashekar informed that a high power committee meeting would be held in Bengaluru on September 3 regarding the Mysuru Dasara 2021 celebrations and another meeting in Mysuru on September 8.
Keywords: Mysuru District In-charge Minister/ S.T. Somashekar/ police personnel/ dismissal/ Mysuru Dasara/ meeting

Key words: Gang rape -case –Mysore-police-minister-ST somashekar

website developers in mysore