ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ..?

ಮೈಸೂರು,ಆಗಸ್ಟ್,28,2021(www.justkannada.in):  ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಐವರು ಆರೋಪಿಗಳನ್ನ ಪೊಲೀಸರ ತಂಡ ಹೆಡೆಮುರಿ ಕಟ್ಟಿ ಮೈಸೂರಿಗೆ ಕರೆತಂದಿದೆ.

ಬಂಧಿತ ಆರೋಪಿಗಳನ್ನು ಗೌಪ್ಯ ಸ್ಥಳದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು  ಇಡೀ ಪ್ರಕರಣ ಭೇದಿಸಿದ್ದಲ್ಲಿ ನಾಲ್ವರು ಪ್ರಮುಖರು. ಹೌದು, ಒಬ್ಬರು ಡಿಸಿಪಿ, ಒಬ್ಬರು ಇನ್ಸ್‌ ಪೆಕ್ಟರ್, ಇಬ್ಬರು ಸಿಡಿಆರ್ ವಿಭಾಗದ ಸಿಬ್ಬಂದಿ.

ಘಟನೆ ನಡೆದ  ಬೆನ್ನಲ್ಲೆ ಪ್ರಕರಣ ಇಡಿ ರಾಜ್ಯಾದ್ಯಂತ ಭಾರಿ ಸುದ್ಧಿಯಾಗಿತ್ತು. ಈ ಮಧ್ಯೆ  ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದ ಮೊದಲ ದಿನವೇ ಬಸ್ ಟಿಕೆಟ್ ಪತ್ತೆಯಾಗಿತ್ತು.

ಮೈಸೂರಿನಲ್ಲಿ ಘಟನೆ ನಡೆದ ಸ್ಥಳ, ಮತ್ತೊಂದು ಚಾಮರಾಜನಗರ ಒಟ್ಟು ಎರಡು ಕಡೆಗಳಲ್ಲಿ ಮೊಬೈಲ್ ಟವರ್ ಡಂಪ್ ನಡೆಸಲಾಗಿತ್ತು. ಆರೋಪಿಗಳು ತಾಳವಾಡಿಯಿಂದ ಚಾಮರಾಜನಗರಕ್ಕೆ  ಬಂದಿದ್ದರು. ಹೀಗಾಗಿ ಪೊಲೀಸರಿಗೆ ಎರಡೂ ಕಡೆಗಳಲ್ಲಿ ಒಂದೇ ಸಿಮಿಲರ್ ನಂಬರ್ ಸಿಕ್ಕಿದ್ದು, ಆ ಒಂದೇ ನಂಬರ್ ಜಾಡು ಹಿಡಿದು ಪೊಲೀಸರು ಪ್ರಕರಣ ಭೇದಿಸಿದ್ದಾರೆ.

ಮೈಸೂರಿನಲ್ಲಿ ಆಗಸ್ಟ್ 24 ರ ಸಂಜೆ 7 ರಿಂದ‌9 ಗಂಟೆ ಸಮಯ. ಚಾಮರಾಜನಗರದಲ್ಲಿ ಅಂದೇ ಮಧ್ಯಾಹ್ನ 2 ರಿಂದ 3 ಗಂಟೆ ಸಮಯದ ಟವರ್ ಡಂಪ್ ನಡೆದಿತ್ತು. ಈ ಮಾರ್ಗದಲ್ಲಿ ಖಾಕಿ ಆರೋಪಿಗಳನ್ನು ಹಡೆಮುರಿ ಕಟ್ಟಿದೆ.

Key words: Gang rape -case –Mysore-police –arrest- accused