ರಾಜ್ಯ ಬಿಜೆಪಿ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ: ಪರಿಸರ ರಕ್ಷಣೆಯ ಜಾಗೃತಿ ಬಗ್ಗೆ ಚಿತ್ರಕಲಾ ಪ್ರದರ್ಶನ…

ಬೆಂಗಳೂರು,ಅ,2,2019(www.justkannada.in): ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಅನೇಕ ಕಾರ್ಯಗಳನ್ನು ಆಯೋಜಿಸಲಾಗಿತ್ತು.

ಚಿತ್ರಕಲಾವಿದರಾದ ಅಕ್ಷಯ ಜಾಲಿಹಾಳ್ ಅವರು ರಂಗೋಲಿಯಲ್ಲಿ ಬಿಡಿಸಿದ ಮಹಾತ್ಮ ಗಾಂಧಿಯವರ  ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಂಸದೆ ಶೋಭಾ  ಕರಂದ್ಲಾಜೆ ಅವರು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಕಲಾವಿದರಾದ ಅಕ್ಷಯ್ ಅವರನ್ನು ಸನ್ಮಾನಿಸಿದರು.

ಕಾರ್ಯಾಲಯದಲ್ಲಿ ಪರಿಸರ ರಕ್ಷಣೆಯ ಜಾಗೃತಿ ಮೂಡಿಸುವ ಚಿತ್ರಕಲಾ ಪ್ರದರ್ಶನವೂ ನಡೆಯಿತು. ಪ್ಲಾಸ್ಟಿಕ್ ಮುಕ್ತ ಜೀವನದ ಬಗ್ಗೆ ಅರಿವು ಮೂಡಿಸುವ ವೀಡಿಯೊ ಚಿತ್ರವನ್ನು ಶೋಭಾ ಕರಂದ್ಲಾಜೆ  ರವಿಕುಮಾರ್ ಮತ್ತು ಭಾರತಿ ಶೆಟ್ಟಿ ಅವರು ಬಿಡುಗಡೆ ಮಾಡಿದರು. ಘನತ್ಯಾಜ್ಯ ನಿರ್ವಹಣೆ ಕುರಿತಾದ ಪುಸ್ತಕವೂ ಇದೇ ಸಂದರ್ಭದಲ್ಲಿ ಬಿಡುಗಡೆಯಾಯಿತು.

ಬಿಜೆಪಿ ಪ್ರಕಾಶನ ಪ್ರಕೋಷ್ಠದ ಸಂಚಾಲಕರಾದ  ನರಸಿಂಹ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಚಿತ್ರ ಕಲಾ ಪ್ರದರ್ಶನ, ವೀಡಿಯೋ ನಿರ್ಮಾಣವಾಗಿದ್ದು ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ  ಲೋಕೇಶ್ ಅಂಬೇಕಲ್, ರಾಜ್ಯ ಬಿಜೆಪಿ ಸಹ ವಕ್ತಾರ ರಾದ ಅನ್ವರ್ ಮಾಣಿಪ್ಪಾಡಿ ಅವರು ಉಪಸ್ಥಿತರಿದ್ದರು.

Key words: Gandhi Jayanti- celebration  -BJP office- exhibition –environmental- protection