ಯೋಗರಾಜ್ ಭಟ್-ಗಣೇಶ್ ‘ಗಾಳಿಪಟ 2’ ಚಿತ್ರದ ಮೇಕಿಂಗ್ ಫೋಟೋ ಲೀಕ್ !

ಬೆಂಗಳೂರು, ಡಿಸೆಂಬರ್ 17, 2019 (www.justkannada.in): ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ.

ಈ ನಡುವೆ ಚಿತ್ರತಂಡ ಎಕ್ಸ್ ಕ್ಲೂಸಿವ್ ಮೇಕಿಂಗ್ ಚಿತ್ರವೊಂದನ್ನು ಹರಿಯಬಿಟ್ಟಿದೆ. ಗಾಳಿಪಟ ಚಿತ್ರ ತರಹದ್ದೇ ಮತ್ತೊಂದು ಹಾಡು ಗಾಳಿಪಟ 2 ರಲ್ಲೂ ಇರಲಿದೆ.

ಈ ಹಾಡಿಗೆ ಮತ್ತೆ ಗಣೇಶ್, ದಿಗಂತ್ ಜತೆಗೆ ಮತ್ತೊಬ್ಬ ನಾಯಕ ಪವನ್ ಹೆಜ್ಜೆ ಹಾಕಿದ್ದಾರೆ. ಹಾಡಿನ ಚಿತ್ರೀಕರಣದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.