ಸುಮಾರು 2 ಗಂಟೆಗಳ ಕಾಲ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನ ಸಂಪೂರ್ಣ ಮುಖ್ಯಾಂಶಗಳು ಇಲ್ಲಿದೆ ನೋಡಿ…

ನವದೆಹಲಿ,ಜು,5,2019(www.justkannada.in):  ಎರಡನೇ ಅವಧಿಗೆ ದೇಶದಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮೊದಲ ಬಜೆಟ್ ಅನ್ನ ಇಂದು ಮಂಡಿಸಿದ್ದು, ಕೃಷಿ, ನೀರಾವಾರಿ, ಮೂಲಸೌಕರ್ಯ  ಸೇರಿ ಹಲವು ಕ್ಷೇತ್ರಗಳಲ್ಲಿ ಯೋಜನೆಗಳನ್ನ ಘೋಷಣೆ ಮಾಡಿದೆ.

ಕೇಂದ್ರ ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರು ಇಂದು ಮೊದಲ ಬಾರಿಗೆ ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, *  ಬಲಿಷ್ಠ ದೇಶ, ಬಲಿಷ್ಠ ನಾಗರಿಕ ನಮ್ಮ ಗುರಿಯಾಗಿದೆ. ಮೂಲಸೌಕರ್ಯ, ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತದೆ.   ಐದು ವರ್ಷದ ಹಿಂದೆ ಜಗತ್ತಿನಲ್ಲಿ ಭಾರತದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು. ಪ್ರಸ್ತುತ 5ನೇ ಸ್ಥಾನದಲ್ಲಿದೆ. ಈ ನಡುವೆ ಸರ್ಕಾರಿ ಪ್ರಕ್ರಿಯೆಗಳನ್ನು ಸರಳಗೊಳಿಸುತ್ತೇವೆ ಎಂದು ತಿಳಿಸಿದರು.

ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನ ಸಂಪೂರ್ಣ ಮುಖ್ಯಾಂಶ ಇಲ್ಲಿದೆ ನೋಡಿ…

*  ಮುದ್ರಾ ಮೂಲಕ ಸಾಮಾನ್ಯ ಜನರ ಜೀವನದಲ್ಲಿ ಬದಲಾವಣೆ

*  ಉಡಾನ್ ಯೋಜನೆಯಿಂದ ಜನಸಾಮಾನ್ಯರ ಪಾಲಿಗೆ ಆಶಾಕಿರಣ

*  ಭಾರತದಲ್ಲಿ 3 ಟ್ರಿಲಿಯನ್‌ ಆರ್ಥಿಕತೆ ಇತ್ತು. ಇದೀಗ ಕೆಲ ವರ್ಷಗಳಲ್ಲೇ 5 ಟ್ರಿಲಿಯನ್‌ ಆರ್ಥಿಕತೆ ಯೋಜನೆ ರೂಪಿಸಿದೆ. ನಾವು ದೇಶವನ್ನು ಎತ್ತರಕ್ಕೆ ಕೊಂಡೊಯ್ಯಲು ಬದ್ಧರಿದ್ದೇವೆ.

* ‘ಒನ್ ನೇಶನ್ ಒನ್ ಗ್ರಿಡ್’ ಮೂಲಕ ವಿದ್ಯುತ್ ಸೌಕರ್ಯ. ಗ್ಯಾಸ್ ಗ್ರಿಡ್, ವಾಟರ್ ಗ್ರಿಡ್ ನಿರ್ಮಾಣಕ್ಕೆ ನಿರ್ಧಾರ.

* ಜಲಮಾರ್ಗ ಯೋಜನೆಗೆ ಒತ್ತು. ಗಂಗಾನದಿಯಲ್ಲಿ ಒಳನಾಡು ಜಲಸಾರಿಗೆಗೆ ಆಧ್ಯತೆ. ಸರಕು ಸಾಗಣೆಗೆ ಅನುಕೂಲಕಾರಿ ವಾತಾವರಣ ನಿರ್ಮಾಣ.

*   ಎಲೆಕ್ಟ್ರಿಕ್ ವಾಹನ ಖರೀದಿಗೆ ಪ್ರೋತ್ಸಾಹ ಧನ ಘೋಷಣೆ ,ಮುಂದಿನ 3 ವರ್ಷಕ್ಕೆ 10 ಸಾವಿರ ಕೋಟಿ ಪ್ರೋತ್ಸಾಹ ಧನ,ಎಲೆಕ್ಟ್ರಿಕ್ ವಾಹನಗಳ ಮೂಲಕ ಪರಿಸರ ಪ್ರೇಮಿ ವಾಹನ ವ್ಯವಸ್ಥೆ

* ಸಾಗರ್ ಮಾಲಾ, ಭಾರತ್ ಮಾಲಾ ಮೂಲಕ ಸಾರಿಗೆ ಕ್ಷೇತ್ರಕ್ಕೆ ಕೊಡುಗೆ. ಸಾರಿಗೆ ವೆಚ್ಚವನ್ನು ಕಡಿಮಗೊಳಿಸೋ ಉದ್ದೇಶದಿಂದ ಯೋಜನೆ. ಗ್ರಾಮ ಹಾಗೂ ನಗರಗಳ ಅಂತರ ಕಡಿಮೆಗೊಳಿಸುವ ನಿಟ್ಟಿನಿಂದ ಸಾರಿಗೆ ಕಾಂತ್ರಿ.

* 300 ಕಿ. ಮೀ. ಮೆಟ್ರೋ ಯೋಜನೆಗೆ ಅನುಮೋದನೆ.

* ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 1 ರೂ. ಸೆಸ್ ಏರಿಕೆ

* ಬಂಗಾರದ ಮೇಲಿನ ಆಮದು ಸುಂಕ ಶೇ. 10ರಿಂದ 12.5ಕ್ಕೆ ಏರಿಕೆ.

*  ರಕ್ಷಣಾ ಸಾಮಾಗ್ರಿಗಳಿಗೆ ಕಸ್ಟಮ್ಸ್ ತೆರಿಗೆ ಇಲ್ಲ, ಸ್ವದೇಶಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ತೆರಿಗೆ ವಿನಾಯಿತಿ, ಆಮದಾಗುವ ಪುಸ್ತಕಗಳಿಗೆ ಶೇ, 5 ರಷ್ಟು ತೆರಿಗೆ

* ಡಿಜಿಟಲ್‌ ಪೇಮೆಂಟ್‌ ಗೆ ಉತ್ತೇಜನ. ಕ್ರೆಡಿಕ್‌ ಕಾರ್ಡ್‌ ಪೇಮೆಂಟ್‌ಗಳ ಮೇಲೆ ಶುಲ್ಕ ಇಲ್ಲ.

* ಮಧ್ಯಮ ವರ್ಗದವರ ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ. 7 ಲಕ್ಷದವರೆಗಿನ ಗೃಹ ಸಾಲಕ್ಕೆ 15 ವರ್ಷ ತೆರಿಗೆ ವಿನಾಯಿತಿ.

* ತೆರಿಗೆ ಪಾವತಿಗೆ ಇನ್ನು ಪ್ಯಾನ್‌ ಕಾರ್ಡ್‌ ಅಥವಾ ಆಧಾರ್‌ ಕಾರ್ಡ್‌ ಇದ್ದರೆ ಸಾಕು . ಪ್ಯಾನ್‌ ಕಾರ್ಡ್‌ ಕಡ್ಡಾಯವಲ್ಲ. ಐಟಿ ರಿಟರ್‌ನ್ಸ್‌ ಸಲ್ಲಿಸಲು ಆಧಾರ್‌ ಕಾರ್ಡ್‌ ಸಾಕು.

* ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ 1.25 ಲಕ್ಷದವರೆಗೆ ಸಬ್ಸಿಡಿ : ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳಿಗೆ ಶೇ. 5 ರಷ್ಟು ಜಿಎಸ್ ಟಿ ಇಳಿಕೆ

*  5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ತೆರಿಗೆ ಇಲ್ಲ: ವಾರ್ಷಿಕ ಆದಾಯ 400 ಕೋಟಿ ಹೊಂದಿದ ಉದ್ಯಮಕ್ಕೆ ಶೇ. 25 ರಷ್ಟು ತೆರಿಗೆ

* ಅಟಲ್‌ ಪೆನ್ಷನ್‌, ನ್ಯಾಷನಲ್‌ ಪೆನ್ಷನ್‌ ಯೋಜನೆ ಪಿಎಫ್ಆರ್‌ಡಿಐ ಜೊತೆ ಜೋಡಿಕೆ. ಮೂಲ ಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷಕ್ಕೆ ನೂರು ಲಕ್ಷ ಕೋಟಿ ರೂಪಾಯಿ.

*  ನೇರ ತೆರಿಗೆ 11 ಲಕ್ಷ ಕೋಟಿಗೆ ಏರಿಕೆ, ನೇರ ತೆರಿಗೆ ಸಂಗ್ರಹದಲ್ಲಿ ಶೇ, 78 ರಷ್ಟು ಏರಿಕೆ. ಜನರ ಮೇಲೆ ತೆರಿಗೆ ಹೊರಿಸಲು ಬಯಸುವುದಿಲ್ಲ- ನಿರ್ಮಲಾ ಸೀತಾರಾಮನ್

*1. 2.5, 10, 20 ರೂಪಾಯಿ ನಾಣ್ಯಗಳ ಬಿಡುಗಡೆ: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಖಾಸಗಿ ಹೂಡಿಕೆಗೆ ಆಹ್ವಾನ

* ಬ್ಯಾಂಕ್‌ಗಳ ಏಕೀಕರಣಕ್ಕೆ ಒತ್ತು. ಬ್ಯಾಂಕ್‌ಗಳ 1 ಲಕ್ಷ ಕೋಟಿ ಅನುತ್ಪಾದಕ ಆಸ್ತಿ ರಿಕವರಿ. ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಗೆ 70 ಸಾವಿರ ಕೋಟಿ ರೂಪಾಯಿ ಮರುಪೂರ್ಣ.

* 17 ಪ್ರವಾಸಿ ಕೇಂದ್ರಗಳನ್ನು ವಿಶ್ವದರ್ಜೆಗೆ ಏರಿಸಲು ನಿರ್ಧಾರ. ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಭಾರತದ ರಾಯಭಾರ ಕಚೇರಿ ಸ್ಥಾಪನೆ.

* ಜನ್‌ಧನ್‌ ಖಾತೆ ಹೊಂದಿರುವ ಮಹಿಳೆಯರಿಗೆ 5 ಸಾವಿರ ರೂಪಾಯಿ ಓವರ್‌ ಡ್ರಾಫ್ಟ್. ದೇಶದ ಎಲ್ಲಾ ಮಹಿಳಾ ಸಂಘಗಳಿಗೆ ಬಡ್ಡಿ ವಿನಾಯಿತಿಯಲ್ಲಿ ಸಾಲ.

* ಎನ್ ಆರ್ ಐಗಳಿಗೆ ಆಧಾರ್ ಆಧಾರಿತ ಪಾಸ್ ಪೋರ್ಟ್ ನೀಡಲು ನಿರ್ಧಾರ

* ನಾರಿ ಟು ನಾರಾಯಣಿ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು. ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಅನನ್ಯ. ಲಿಂಗ ತಾರತಮ್ಯ ನಿವಾರಣೆಗೆ ಸರ್ಕಾರದಿಂದ ಹೊಸ ಯೋಜನೆ. ಉದ್ಯಮಗಳಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಿಸಲು ಕ್ರಮ.

* ಕಾಯಕವೇ ಕೈಲಾಸ ಎಂದು ಜಗಜ್ಯೋತಿ ಬಸವೇಶ್ವರರ ವಚನ ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್

* ಎಲ್ ಇಡಿ ಬಳಕೆ ಉತ್ತೇಜಿಸಲು 60 ಕೋಟಿ ಬಲ್ಬ್ ವಿತರಣೆ, ಎಲ್ ಇಡಿ ಬಳಕೆಯಿಂದ ಪ್ರತಿವರ್ಷ 18 ಸಾವಿರ ಕೋಟಿ ಉಳಿತಾಯ, ಸೋಲಾರ್ ಮೂಲಕ ಎಲ್ ಇಡಿ ಬಳಕೆಗೆ ಉತ್ತೇಜನ

*  60 ವರ್ಷ ಮೇಲ್ಪ ಟ್ಟ ಕಾರ್ಮಿಕರಿಗೆ ತಿಂಗಳಿಗೆ 3 ಸಾವಿರ ರೂ. ಪೆನ್ಷನ್.

* ರೋಬೋಟಿಕ್ ತಂತ್ರಜ್ಞಾನ ಉದ್ಯಮಕ್ಕೆ ಆದ್ಯತೆ. ಸ್ಯ್ಟಾಂಡ್ ಅಪ್ ಯೋಜನೆಗಳಲ್ಲಿ 2 ವರ್ಷದಲ್ಲಿ 300 ಉದ್ಯಮ ಸ್ಥಾಪನೆ.

* ಸ್ಟ್ಯಾಂಡ್ ಅಪ್ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಹಣದ ನೆರವು

*  ನೂತನ 4 ಕಾರ್ಮಿಕ ಕೋರ್ಟ್ ಗಳ ಸ್ಥಾಪನೆಗೆ ನಿರ್ಧಾರ, ಸ್ಟಾರ್ಟ್ ಅಪ್ ಯೋಜನೆಗಳ ಮಾಹಿತಿಗಾಗಿ ನೂತನ ವಾಹಿನಿ,ದೂರದರ್ಶನ ಸಹಭಾಗಿತ್ವದಲ್ಲಿ ನೂತನ ವಾಹಿನಿ ಕಾರ್ಯಾರಂಭ

* ರಾಷ್ಟ್ರೀಯ ಕ್ರೀಡಾ ಶಿಕ್ಷಣ ಪ್ರಾಧಿಕಾರ ನಿರ್ಮಾಣ. 10 ಲಕ್ಷ ಯುವಕರಿಗೆ ಕೌಲಶ್ಯ ಅಭಿವೃದ್ಧಿ ತರಬೇತಿ. 3ಡಿ ಪ್ರಿಂಟಿಂಗ್ ಅಧ್ಯಯನಕ್ಕೆ ಯುವಕರಿಗೆ ನೆರವು.

* ಸ್ವಚ್ಛ ಭಾರತ್‌ ಯೋಜನೆಯಡಿ 9.6 ಕೋಟಿ ಶೌಚಾಲಯ ನಿರ್ಮಾಣ. ಗ್ರಾಮೀಣ ಪ್ರದೇಶದಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ.

* ಭಾರತದ ಮೂರು ವಿದ್ಯಾಸಂಸ್ಥೆಗಳಿಗೆ ವಿಶ್ವ ಮಾನ್ಯತೆ: ಐಐಟಿ, ಐಐಎಂ. ಐಐಎಸ್ ಸಿ ಸಂಸ್ಥೆಗಳಿಗೆ 400 ಕೋಟಿ ಅನುದಾನ, ವಿಶ್ವ ಮಟ್ಟದ ಶಿಕ್ಷಣ ಸಂಸ್ಥೆಗಳನ್ನಾಗಿಸಲು ಅನುದಾನ

* ರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಸ್ಥಾಪನೆ. ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು. ‘ಗ್ಯಾನ್’ ಯೋಜನೆ ಮೂಲಕ ಐಐಎಂ, ಐಐಟಿ, ಐಐಎಸ್ ಸಿ ಜಂಟಿ ಅಧ್ಯಯನ.

* ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಏಕ ರೀತಿಯ ಜೀವನಕ್ಕೆ ಒತ್ತು ನೀಡಲಾಗುವುದು

* ಸಬ್ ಅರ್ಬನ್ ರೈಲು ಯೋಜನೆಗಳಿಗೆ ಒತ್ತು. ಸರಕು ಸಾಗಣೆ ರೈಲುಗಳಿಗೆ ಪ್ರತ್ಯೇಕ ಟ್ರ್ಯಾಕ್ ನಿರ್ಮಾಣ. ಮೆಟ್ರೋ ರೈಲು ಉತ್ತೇಜಿಸಲು ಪಿಪಿಪಿ ಮಾದರಿ ಯೋಜನೆಗೆ ಒತ್ತು.

* ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 81 ಲಕ್ಷ ಮನೆಗಳ ನಿರ್ಮಾಣ ಯೋಜನೆ. 26 ಲಕ್ಷ ಮನೆಗಳು ಈಗಾಗಲೆ ನಿರ್ಮಾಣವಾಗಿದೆ. 24 ಲಕ್ಷ ಕುಟುಂಬಗಳಿಗೆ ಸೂರು ಭಾಗ್ಯ. ನೂತನ ತಂತ್ರಜ್ಞಾನದಿಂದ ಆಧುನಿಕ ಮನೆ ನಿರ್ಮಾಣ.

*ಜಲಶಕ್ತಿ ಸಚಿವಾಲಯ ಸ್ಥಾಪನೆ. ಜಲಸಂವರ್ಧನೆ, ಕುಡಿಯುವ ನೀರು ಯೋಜನೆಗೆ ಮೊದಲ ಆದ್ಯತೆ. ಹರ್ ಘರ್ ಜಲ್ ಯೋಜನೆ ಮೂಲಕ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ.

* ಶೂನ್ಯ ಬಂಡವಾಳ ಕೃಷಿಗೆ ಹೆಚ್ಚಿನ ಆದ್ಯತೆ. ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಹೂತ್ತು, ಕೃಷಿಕರಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆ 10 ಸಾವಿರ ಹೊಸ ಕೃಷಿಕರ ಸಂಘ ಸ್ಥಾಪಿಸಲು ನಿರ್ಧಾರ

* ಸಾಂಪ್ರದಾಯಿಕ ಉದ್ದಿಮೆಗಳಿಗೆ ಉತ್ತೇಜನ ನೀಡಲು ನಿರ್ಧಾರ, ಜೇನು, ಬಿದಿರು ಖಾದಿ ಉದ್ಯಮಗಳಿಗೆ ಸರ್ಕಾರದ ಉತ್ತೇಜನ, ಪ್ರತಿ ವರ್ಷ 50 ಸಾವಿರ ಜನರಿಗೆ ನೆರವು

*  ಶೇ .97 ರಷ್ಟು ಗ್ರಾಮಗಳಿಗೆ ಸರ್ವಋತು ಸಾರಿಗೆ ಸೌಲಭ್ಯ, ಮುಂದಿನ ಐದು ವರ್ಷದಲ್ಲಿ 25 ಸಾವಿರ ಕಿ . ಮೀ. ರಸ್ತೆ ನಿರ್ಮಾಣ,1.25 ಲಕ್ಷ ಕಿ. ಮೀ. ರಸ್ತೆ ಮೇಲ್ದರ್ಜೆಗೇರಿಸಲು ನಿರ್ಧಾರ

*  ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಚಾಲನೆ,ಪಿಎಂಜಿಎಸ್ ವೈ ಯೋಜನೆ ಗ್ರಾಮೀಣ ಜನರಲ್ಲಿ ಬದಲಾವಣೆ ತಂದಿದೆ- ಸೀತಾರಾಮನ್

*  ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ 1.95 ಕೋಟಿ ಮನೆಗಳ ನಿರ್ಮಾಣಕ್ಕೆ ನಿರ್ಧಾರ, ಪ್ರತಿ ಮನೆಗೂ ಶೌಚಾಲಯ, ವಿದ್ಯುತ್, ಎಲ್ ಪಿಜಿ ಸೌಕರ್ಯ

*  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 24 ಸಾವಿರ ಕೋಟಿ.

* ಭಾರತದಲ್ಲಿ ಎಫ್‌ಡಿಐ ಹೂಡಿಕೆದಾರರನ್ನು ಆಕರ್ಷಿಸಲು ಕ್ರಮ. ವಿಮೆ ಕ್ಷೇತ್ರದಲ್ಲಿ ಶೇ. 100ರಷ್ಟು ಎಫ್‌ಡಿಐ ಹೂಡಿಕೆಗೆ ಅನುಮತಿ. ಇಳಿತಾಯ ಯೋಜನೆಗಳಿಗೆ ಜರನ್ನು ಆಕರ್ಷಿಸಲು ಹಲವು ಯೋಜನೆ.

* ಎಫ್‌ಡಿಐ ಹೂಡಿಕೆಗೆ ಈಗಲೂ ಭಾರತ ಪ್ರಮುಖ ಮಾರುಕಟ್ಟೆ. ಎಫ್‌ಡಿಐ 1.3 ಟ್ರಿಲಿಯನ್ ನಿಂದ 1.5 ಟ್ರಿಲಿಯನ್ ಗೆ ಏರಿಕೆ.

* ರೈಲು ಮೂಲಸೌಕರ್ಯ ಅಭಿವೃದ್ಧಿಗೆ 50 ಲಕ್ಷ ಕೋಟಿ ಅಗತ್ಯ, ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ

* ಕಾರ್ಪೋರೇಟ್ ಬಾಂಡ್ ಕುರಿತು ಹೊಸ ನೀತಿ ಜಾರಿಗೆ ನಿರ್ಧಾರ: ಎಫ್ ಟಿಐ ಉತ್ತೇಜಿಸಲು ಕೆವೈಸಿ ನೀತಿಯ ಸರಳೀಕರಣ

*  ಪ್ರಧಾನಮಂತ್ರಿ ‘ಕರ್ಮಯೋಗಿ ಮಾನ್ ಸಮ್ಮಾನ್’ ಯೋಜನೆಗೆ ಚಾಲನೆ. 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪೆನ್ಶನ್.

* ಪ್ರತಿಯೊಬ್ಬರಿಗೂ ವಸತಿ ಕಲ್ಪಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಅದಕ್ಕಾಗಿ 350 ಕೋಟಿ ರು. ಎಂಎಸ್ಎಂಇಗಳಿಗೆ ಸಾಲ ನೀಡಿಕೆ.

*  ಹೆಚ್ಚಿನ ಗೃಹ ನಿರ್ಮಾಣಕ್ಕೆ ಆದ್ಯತೆ , ಎಂಎಸ್ ಎಂಇಗಳಿಗೆ 350 ಕೋಟಿ ಸಾಲ ನೀಡಿಕೆ: ಎಂಸ್ ಎಂ ಇಗಳಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಸೌಲಭ್ಯ.

ಸುಮಾರು 2 ಗಂಟೆ 15 ನಿಮಿಷಗಳ ಕಾಲ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದರು.

Key words: full Highlights– Union Budget – Finance Minister -Nirmala Sitharaman