ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌’ಗೆ ಸೈನಾ

ಪ್ಯಾರಿಸ್, ಅಕ್ಟೋಬರ್ 25, 2019 (www.justkannada.in): ಭಾರತದ ಸೈನಾ ನೆಹ್ವಾಲ್ ನಡೆಯತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಸೈನಾ 21-10, 21-11ರ ನೇರ ಗೇಮ್‌ಗಳಲ್ಲಿ ಡೆನ್ಮಾರ್ಕ್‌ನ ಹಾಜ್‌ಮಾರ್ಕ್ ಕೇರಸ್‌ ಫೀಟ್‌ ವಿರುದ್ಧ ಜಯಿಸಿದರು.

27 ನಿಮಿಷಗಳ ಹೋರಾಟದಲ್ಲಿ ಸೈನಾ ಏಕಪಕ್ಷೀಯ ಗೆಲುವು ಸಾಧಿಸಿದರು. ಚುರುಕಾದ ರ‍್ಯಾಲಿ ಮತ್ತು ಶಕ್ತಿಶಾಲಿ ಸ್ಮ್ಯಾಷ್‌ಗಳನ್ನು ಹೊಡೆದ ಸೈನಾ ಪಾರಮ್ಯ ಮೆರೆದರು.