ಬಿಪಿಎಲ್ ಕಾರ್ಡ್’ಗೆ ಅರ್ಜಿ ಸಲ್ಲಿಸಿದರಿಗೂ ಉಚಿತ ಅಕ್ಕಿ: ಸಚಿವ ಗೋಪಾಲಯ್ಯ

ಬೆಂಗಳೂರು, ಏಪ್ರಿಲ್ 17, 2020 (www.justkannada.in): ‌

ಎರಡು ತಿಂಗಳ ಪಡಿತರ ಕೊಡಬೇಕು ಅಂತ ಸಿಎಂ ನಿರ್ಧಾರ ಮಾಡಿದ ಪ್ರಕಾರ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ನೀಡಲಾಗ್ತಿದೆ ಎಂದು ವಿಧಾನಸೌಧದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಗೋಪಾಲಯ್ಯ ಹೇಳಿದರು.

ಸಚಿವತು ಹೇಳಿದ್ದಿಷ್ಟು…

ಇದೇ ಮೊದಲ ಬಾರಿಗೆ ಎರಡ ತಿಂಗಳ ಪಡಿತರವನ್ನು ಇಡೀ ರಾಜ್ಯಾದ್ಯಂತ 90% ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಹಾರ ದಾನ್ಯಗಳ ವಿತರಣೆ ಮಾಡಲಾಗಿದೆ.

ಬಿ.ಪಿ .ಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ
ನಾಳೆಯಿಂದ ಪ್ರತಿ ತಿಂಗಳಂತೆ 3 ತಿಂಗಳು ೧೦ ಕೆ.ಜಿ ಅಕ್ಕಿ ನೀಡುತ್ತೇವೆ.

ಉಜ್ವಲ ಮತ್ತು ಸಿಎಂ ಅನಿಲ ಭಾಗ್ಯ ಯೋಜನೆಯನ್ನು ಮೂರು ತಿಂಗಳಿಗೆ ವಿಸ್ತರಿಸಲಾಗುತ್ತದೆ.

ಮೇ 1ರಿಂದ ಎಲ್ಲ ಪಡಿತರ ಅಂಗಡಿಗಳಲ್ಲಿ 10ಕೆಜಿ ಅಕ್ಕಿ , 1ಕೆಜಿ ತೊಗರಿ ಬೇಳೆ ವಿತರಣೆ ಮಾಡಲಾಗುತ್ತದೆ.

ಎಪಿಎಲ್ ಪಡಿತರ ಚೀಟಿದಾರರಿಗೂ ಕೆಜಿ ಗೆ 15ರೂ ದರದಲ್ಲಿ 10 ಕೆಜಿ ಅಕ್ಕಿ ವಿತರಿಸಲಾಗುತ್ತದೆ.ಮೇ 1,ರಿಂದ ಅಕ್ಕಿ ವಿತರಣೆ ಆರಂಭವಾಗುತ್ತದೆ.