ಶಾಲಾ ವ್ಯಾನ್ ಹರಿದು ನಾಲ್ಕು ವರ್ಷದ ಬಾಲಕ ಸಾವು…

Promotion

ಮೈಸೂರು,ಜು,20,2019(www.justkannada.in): ಶಾಲಾ ವ್ಯಾನ್ ಹರಿದು ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಕೆ ಆರ್ ನಗರ ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯೋಗೇಶ್ (4ವರ್ಷ) ಮೃತಪಟ್ಟ ಬಾಲಕ. ಲಕ್ಷ್ಮಿಪುರ ಗ್ರಾಮದ ರಾಯಲ್ ಬ್ರೈಟ್ ಶಾಲೆಗೆ ಸೇರಿದ ವ್ಯಾನ್ ಹರಿದು ಯೋಗೇಶ್ ಸಾವನ್ನಪ್ಪಿದ್ದಾನೆ.  ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಕುರಿತು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Four-year-old boy- dies -school van-crashes-mysore