ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್: ನ್ಯೂಜಿಲ್ಯಾಂಡ್ ವಿರುದ್ಧ ದಾಖಲೆ ಬರೆದ ಮಾಲಿಂಗ

ಬೆಂಗಳೂರು, ಸೆಪ್ಟೆಂಬರ್ 07, 2019 (www.justkannada.in): ನ್ಯೂಜಿಲೆಂಡ್ ವಿರುದ್ಧ ನಡೆದ ಅಂತಿಮ ಮೂರನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕ ಲಸಿತ್ ಮಾಲಿಂಗಾ 4 ಎಸೆತಗಳಲ್ಲಿ ನಾಲ್ಕು ವಿಕೆಟ್ ಗಳಿಸಿ ಮಿಂಚಿದ್ದಾರೆ.

ಲಂಕಾದ ಪಲ್ಲೆಕೆಲೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿತು. ಉತ್ತಮ ಮೊತ್ತ ಕಲೆಹಾಕುವಲ್ಲಿ ಎಡವಿದ ಸಿಂಹಳೀಯರು ಧನುಷ್ಕಾ ಅವರ 30 ಹಾಗೂ ಡಿಕ್ವೆಲ್​ರ 24 ರನ್​ ಗಳ ನೆರವಿನಿಂದ 20 ಓವರ್​ಗೆ 8 ವಿಕೆಟ್ ಕಳೆದುಕೊಂಡು 125 ರನ್ ಕಲೆಹಾಕಿತು. ಕಿವೀಸ್ ಪರ ಸ್ಯಾಂಟನರ್ ಹಾಗೂ ಟಾಡ್ ಅಸ್ಟಲೆ ತಲಾ 3 ವಿಕೆಟ್ ಪಡೆದರು.

126 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್​ಗೆ ಮಾಲಿಂಗ ಮಾರಕವಾಗಿ ಪರಿಣಮಿಸಿದರು. ಪಂದ್ಯದ ಮೂರನೇ ಓವರ್ ಕೈಗೆ ಎತ್ತಿಕೊಂಡ ಲಸಿತ್ 4 ಎಸೆತಗಳಲ್ಲಿ 4 ವಿಕೆಟ್ ಕಿತ್ತರು. ಕ್ರಮವಾಗಿ 3ನೇ ಚೆಂಡಿನಲ್ಲಿ ಮುನ್ರೋ ಬೌಲ್ಡ್ ಆದರೆ, 4ನೇ ಎಸೆತದಲ್ಲಿ ರುದರ್ಫರ್ಡ್ ಎಲ್​​ಬಿಗೆ ಬಲಿಯಾದರು. 5ನೇ ಚೆಂಡಿನಲ್ಲಿ ಗ್ರ್ಯಾಂಡ್ ಹೋಮ್ ಬೌಲ್ಡ್​ ಆದರೆ, ಕೊನೆಯ ಎಸೆತದಲ್ಲಿ ರಾಸ್ ಟೇಲರ್ ಎಲ್​ಬಿ ಬಲೆಗೆ ಸಿಲುಕಿಸಿದರು.