ಜಿ.ಟಿ ದೇವೇಗೌಡರು ಎಲ್ಲಿಗೆ ಹೋಗಬೇಕೋ ಹೋಗಲಿ ಎಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು: ‘ಕೈ’ ಜತೆ ಮೈತ್ರಿ ಮುಂದುವರಿಕೆ ಕುರಿತು ಏನಂದ್ರು ಗೊತ್ತೆ..?

kannada t-shirts

ಬೆಂಗಳೂರು, ಸೆ.12,2019(www.justkannada.in):  ಜೆಡಿಎಸ್ ಕಾರ್ಯಕ್ರಮಗಳಿಂದ ದೂರ ಉಳಿದಿರುವ ಮಾಜಿ ಸಚಿವ ಜಿ.ಟಿ ದೇವೇಗೌಡರ ವಿರುದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಗರಂ ಆಗಿದ್ದಾರೆ.

ಜಿ.ಟಿ ದೇವೇಗೌಡರು ಎಲ್ಲಿಗೆ ಹೋಗಬೇಕೋ ಹೋಗಲಿ. ಅವರನ್ನ ಯಾರು ಹಿಡಿದುಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ದೇವೇಗೌಡರು, ವೈಯಕ್ತಿಕವಾಗಿ ನಾನು ಯಾರನ್ನು ಟೀಕೆ ಮಾಡಿಲ್ಲ. ಜಿ.ಟಿ ದೇವೇಗೌಡರು ಹೇಳಿರುವುದನ್ನ ಕೇಳಿಸಿಕೊಂಡಿದ್ದೇನೆ. ದೇವೇಗೌಡರು ನನ್ನ ಗುರುವಲ್ಲ ಎಂದು ಹೇಳಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ನನ್ನ ಗುರುವಲ್ಲ ಎಂದಿದ್ದಾರೆ. ನಾನು ಸ್ವಂತವಾಗಿ ಬೆಳೆದಿದ್ದೇನೆ ಎಂದು ಜಿ.ಟಿ ದೇವೇಗೌಡರು ಹೇಳಿದ್ದಾರೆ. ಜಿ.ಟಿ ದೇವೇಗೌಡರ ಬಗ್ಗೆ ನಾನೇನು ಮಾತನಾಡಿದ್ದನಾ..? ಎಂದು ಪ್ರಶ್ನಿಸಿದರು.

ಸೋನಿಯಾ ಗಾಂಧಿ ಜತೆ ಚರ್ಚಿಸಿ ಮೈತ್ರಿ ಬಗ್ಗೆ ನಿರ್ಧಾರ…

ಜೆಡಿಎಸ್-ಕಾಂಗ್ರೆಸ್ ದೋಸ್ತಿ ಮುಂದುವರೆಸುವ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ನಮ್ಮ ಶಕ್ತಿ ಏನಿದೆಯೋ ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ತೇವೆ ಎಂದು ತಿಳಿಸಿದರು.

ಇನ್ಮುಂದೆ ಬಿ ಟೀಮ್ ಎಂದು ಕರೆದರೆ ಸಹಿಸಲ್ಲ…

ಯಾರು ಇನ್ಮುಂದೆ ನಮ್ಮ ಪಕ್ಷವನ್ನು ‘ಬಿ ಟೀಮ್’ ಎಂದು ಕರೆಯುವುದು ಸಾಧ್ಯವಿಲ್ಲ. ನಾನು ಅದನ್ನೆಲ್ಲಾ ಇಷ್ಟು ದಿನ ಸಹಿಸಿಕೊಂಡು ಸುಮ್ಮನೆ ಇದ್ದೆ. ಆದರೆ ಅದು ಇನ್ಮುಂದೆ ಅದೆಲ್ಲಾ ನಡೆಯುವುದಿಲ್ಲ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ನವರು ಟೀಕಿಸಿ 130 ಸ್ಥಾನಗಳಿಂದ ಕೊನೆಗೆ 78ಕ್ಕೆ ತಲುಪಿದರು ಎಂದು  ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.

Key words: Former Prime Minister- HD DeveGowda – GT DeveGowda –congress-jds- alliance

website developers in mysore