ಯಾರ ಜೊತೆಯೂ ಹೊಂದಾಣಿಕೆ ಇಲ್ಲ: ಬಿಎಸ್ ವೈ ನಿವಾಸದೆದುರು ಧರಣಿ ಮಾಡ್ತೀನಿ ಎಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು…

kannada t-shirts

ಬೆಂಗಳೂರು,ನ,5,2019(www.justkannada.in): ಗುರುಮಿಟ್ಕಲ್ ನಲ್ಲಿ ಜೆಡಿಎಸ್ ಕಾರ್ಯಕರ್ತನ ಮೇಲೆ ಪೊಲೀಸ್ ದೌರ್ಜನ್ಯ ವಿಚಾರ ಸಂಬಂಧ ನವೆಂಬರ್ 15 ರಂದು ಸಿಎಂ  ಬಿಎಸ್ ಯಡಿಯೂರಪ್ಪ  ನಿವಾಸದ ಎದುರು ಧರಣಿ ಮಾಡ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದ್ದಾರೆ.

ಜೆಪಿ‌ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಗುರುಮಿಟ್ಕಲ್ ನಲ್ಲಿ ಜೆಡಿಎಸ್ ಕಾರ್ಯಕರ್ತನ ಮೇಲೆ ಪೊಲೀಸ್ ದೌರ್ಜನ್ಯವಾಗಿದೆ. ಇದನ್ನ ಖಂಡಿಸಿ ನವೆಂಬರ್ 15 ತಾರೀಖು ಬಿಎಸ್ ಯಡಿಯೂರಪ್ಪ ನಿವಾಸದ ಮುಂದೆ ಧರಣಿ ಮಾಡ್ತೇನೆ. ನಮ್ಮ ಪಕ್ಷದ ಯುವ ಮುಖಂಡನ ಬಾಯಿಗೆ ಪಿಸ್ತೂಲ್ ಇಟ್ಟು ಹಿಂಸೆ ಕೊಟ್ಟಿದ್ದಾರೆ ಪಕ್ಷದ ಕಾರ್ಯಕರ್ತರಿಗೆ ಆಗುತ್ತಿರುವ ಕಿರುಕುಳ ನಿಲ್ಲಬೇಕು ಇಲ್ಲದಿದ್ರೆ ನಾನು ಸಿಎಂ ಮನೆ ಮುಂದೆ ಧರಣಿ ಮಾಡ್ತೇನೆ ಎಂದರು.

ಯಾರ ಜೊತೆಯೂ ಹೊಂದಾಣಿಕೆ ಇಲ್ಲ…

ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಎಲ್ಲ ಕಡೆ ಸ್ಪರ್ಧೆ ಮಾಡುತ್ತೇವೆ.  ಯಾರ ಜೊತೆಯೂ ಜೆಡಿಎಸ್  ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಾವು ಸ್ವತಂತ್ರವಾಗಿ ನಾವು ಹೋರಾಟ ಮಾಡುತ್ತೇವೆ. ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸುತ್ತಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ನೋಡಿದ್ದೇನೆ. ಬಿಜೆಪಿ ಅಥವಾ ಕಾಂಗ್ರೆಸ್ ಬಗ್ಗೆ ಯಾವುದೇ ಸಾಫ್ಟ್ ಕಾರ್ನರ್ ಇಲ್ಲ ನಾವು ಯಾವುದೇ ಸಂದರ್ಭದಲ್ಲಿಯೂ ಸಾಫ್ಟ್ ಕಾರ್ನರ್  ತೋರಿಸಲ್ಲ ಎಂದು ಸ್ಪಷ್ಟಪಡಿಸಿದರು.

ನಗರ ಪಾಲಿಕೆ, ನಗರ ಸಭೆ, ಪುರಸಭೆ ಚುನಾವಣೆಯಲ್ಲಿ ನಾವು ಕೆಲವು ಕಡೆ ಪೂರ್ತಿ ಅಭ್ಯರ್ಥಿಗಳನ್ನು ಹಾಕಿಲ್ಲ. ಮಂಗಳೂರು, ದಾವಣಗೆರೆ ನಗರಪಾಲೀಕೆಯಲ್ಲಿ ಪೂರ್ತಿ ಅಭ್ಯರ್ಥಿ ಗಳನ್ನು ಹಾಕಿಲ್ಲ.15 ಅಭ್ಯರ್ಥಿಗಳು ಮಂಗಳೂರಲ್ಲಿ ನಿಂತಿದ್ದಾರೆ. ಈ ನಡುವೆ ಪುರಸಭೆ, ನಗರಸಭೆಗೆ, ಯಾರ ಜೊತೆಗೂ ನಾವು  ಮೈತ್ರಿ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್, ಬಿಜೆಪಿ ವಿರುದ್ದವಾಗಿ ನಾವು ಹೋರಾಟ ಮಾಡ್ತೇವೆ. ಇದಕ್ಕೆ ನಾನು ಸ್ಪಷ್ಟೀಕರಣ ಕೊಡ್ತಿದ್ದೇನೆ ಎಂದು ತಿಳಿಸಿದರು.

ಲೋಕಸಭೆ ಸದಸ್ಯರು ಹಾಗೂ ಮಾಜಿ ಸಚಿವರು ಆ ಕ್ಷೇತ್ರ ‌ಬಲವಾಗಿ ಇಟ್ಟುಕೊಂಡಿದ್ದಾರೆ. ಹೀಗಾಗಿ ನಮ್ಮ ಸಾಮರ್ಥ್ಯ ಎಷ್ಟಿದಯೋ ಅಷ್ಟು ಸ್ಪರ್ಧೆ ಮಾಡ್ತೇವೆ. ನಾವು ಯಾರ ಜೊತೆಗೂ ನಂಟಸ್ತನ ಮಾಡೋದಿಲ್ಲ ನೇರವಾಗಿಯೇ ನಾವು ಚುನಾವಣೆ ಎದುರಿಸುತ್ತೇವೆ ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ. ನಾಳೆ ಬೆಳಿಗ್ಗೆಯೇ ಜೆಡಿಎಸ್ ಮುಗಿದೆ ಹೋಯ್ತು ಎನ್ನುವ ಚರ್ಚೆ ಆಗ್ತಿದೆ. ಯಾವುದೇ ರೀತಿಯ ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡಲ್ಲ.12 ನೇ ತಾರೀಖಿನಂದು ಸಭೆ ಮಾಡೋಕೆ ರೆಡಿ ಇದ್ದೇವೆ. 12 ರಂದು ಪರಿಷತ್ ಸದಸ್ಯರ ಜೊತೆ ಕುಳಿತು ಸಭೆ ಮಾಡುತ್ತೇವೆ.  ಅವರ ಭಿನ್ನಾಭಿಪ್ರಾಯಕ್ಕೂ ಅಂತಿಮ ತೀರ್ಮಾನ ಮಾಡ್ತೇವೆ ಎಂದರು.

ಅನರ್ಹರ ಕುರಿತು ಸುಪ್ರೀಂ ತೀರ್ಪು ಹಿನ್ನೆಲೆ. ಇವತ್ತು ತೀರ್ಪು ಬರುತ್ತೆ ಎಂದು ಕೊಂಡಿದ್ವಿ. ಆದರೆ ಕಾಂಗ್ರೆಸ್ ವೀಡಿಯೋ ವಾದದಿಂದ ತೀರ್ಪು ಮುಂದೆ ಹೋಗಿದೆ. ಈ ವೀಡಿಯೋದಿಂದ ಕೋರ್ಟ್ ತೀರ್ಪು ಏನು ತೀರ್ಮಾನ ಮಾಡುತ್ತೋ ಗೊತ್ತಿಲ್ಲ. ಆ ಬಗ್ಗೆ ನಾನು ಈಗ ಏನು ವ್ಯಾಖ್ಯಾನ ಮಾಡಲ್ಲ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.

ಉಪಚುನಾವಣೆಯಲ್ಲಿ 17 ಕ್ಷೇತ್ರಗಳಲ್ಲೂ ನಿಲ್ಲುವ ಬಗ್ಗೆ ತೀರ್ಮಾನ ಮಾಡಲಾಗಿದೆ.  ಪಕ್ಷದ ಕಾರ್ಯಕರ್ತರಿಗೆ ನಿರಾಸೆ ಬಾರದ ರೀತಿ ಎಲ್ಲಾ ಕಡೆ ಅಭ್ಯರ್ಥಿ ಹಾಕುವ ಬಗ್ಗೆ ತೀರ್ಮಾನ ಮಾಡಿದ್ದೀವಿ. ಈಗಾಗಲೇ ಅಭ್ಯರ್ಥಿ ಗುರುತಿಸುವ ಬಗ್ಗೆ ಅಂತಿಮ ಚರ್ಚೆ ಆಗಿದೆ. ಈಗಾಗಲೇ 70 ರಷ್ಟು ಅಭ್ಯರ್ಥಿ ಆಯ್ಕೆ ಆಗಿದೆ. ಕೆಲವು ಕಡೆ ಯುವಕರು ಮುಂದೆ ಬರುತ್ತಿದ್ದು, ನಾವು ಯೋಚನೆ ಮಾಡ್ತಿದ್ದೇವೆ, ಯಾರಿಗೇ ಟಿಕೆಟ್ ಕೊಡಬೇಕು ಅಂತಾ ,, ಚುನಾವಣೆ ಬಂದರೇ ನಾವು ಸ್ಪರ್ಧೆ ಮಾಡ್ತೇವೆ. ಒಂದು ವೇಳೆ ಚುನಾವಣೆ ಇಲ್ಲ ಅಂದರೆ ನಾವು ಅದರ ಬಗ್ಗೆ ತಲೆ ಕೆಡೆಸಿಕೊಳ್ಳೋದಿಲ್ಲ. ಆದರೆ ಈ ಚುನಾವಣೆಯಲ್ಲಿ ಯಾರ ಜೊತೆಗೂ ಮೈತ್ರಿ ಇಲ್ಲ ನಾವು ಸ್ವತಂತ್ರವಾಗಿಯೇ ಸ್ಪರ್ಧಿಸಿ ಗೆಲ್ಲುತ್ತೇವೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ ಜೊತೆ ಮೈತ್ರಿ ಯಾಗಿದೆ. ಈಗಾಗಲೇ ಇವರೆಡರಿಂದ ಕಹಿ ಅನುಭವ ಕೂಡ ಆಗಿದೆ. ವಿಪಕ್ಷ ಸ್ಥಾನದಲ್ಲಿ ಕುಳಿತು ಹೋರಾಟ ಮಾಡಿದ್ರೂ, ಅವರಿಬ್ಬರ ಜೊತೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೆಚ್.ಡಿ ದೇವೇಗೌಡರು ಸ್ಪಷ್ಟವಾಗಿ ಹೇಳಿದರು.

Key words: Former Prime Minister -HD Deve Gowda-protest-CM BS Yeddyurappa -resident

website developers in mysore