ನೆರೆ ಸಂತ್ರಸ್ತರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಂದ ನೆರವು: ರಾಜ್ಯಕ್ಕೆ ತುರ್ತಾಗಿ 5 ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ…

Promotion

ಬೆಂಗಳೂರು,ಆ,12,2019(www.justkannada.in): ಮಹಾರಾಷ್ಟ್ರ ಹಾಗು ಪಶ್ಚಿಮ ಘಟ್ಟ ಭಾಗಗಳಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಇದರಿಂದ ಕರ್ನಾಟಕದ ೧೭ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪರಿಹಾರಕಾರ್ಯಕ್ಕಾಗಿ ತುರ್ತಾಗಿ ೫೦೦೦ ಕೋಟಿ ಹಣ ಬಿಡುಗಡೆ ಮಾಡುವಂತೆ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದರು.

ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಉತ್ತರ ಕರ್ನಾಟಕ ಸೇರಿದಂತೆ ಹಲವಡೆ ಪ್ರವಾಹ ಆಗಿದೆ ಪ್ರವಾಹದಿಂದ ಸಂಪೂರ್ಣವಾಗಿ ಆ ಪ್ರದೇಶಗಳು ವಾಶ್ ಔಟ್ ಆಗಿದೆ. ನೆರೆಪರಿಹಾರಕ್ಕಾಗಿ ನಾನು ಎರಡು ಲಕ್ಷ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇನೆ.  ಕೆಲವೊಂದು ಕಡೆ ಮಳೆ ಸದ್ಯ ಕಡಿಮೆಯಾಗಿದೆ.  ಕಾವೇರಿ ಭಾಗದಲ್ಲೂ ಪ್ರವಾಹ ಆಗಿದೆ. ಹೀಗಾಗಿ ತುರ್ತಾಗಿ  5 ಸಾವಿರ ಕೋಟಿ ಹಣ ಬಿಡುಗಡೆ ಮಾಡುವಂತೆ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ಹಾಗೆಯೇ ರಾಜ್ಯದ  ಈ ಪರಿಸ್ಥಿತಿಯಲ್ಲಿ ರಾಜಕೀಯಬೇಡ . ಜನರ ಸಮಸ್ಯೆಗಳನ್ನು ನಾವು ಪರಿಹರಿಸಬೇಕು. ನನಗೆ ಯಾವುದೇ ಸಂಬಳ ಬರುತ್ತಿಲ್ಲ. ನಾನು ಯಾವುದೇ ಪಿಂಚಣಿಯನ್ನು ತೆಗದುಕೊಳ್ಳುತ್ತಿಲ್ಲ. ಸದ್ಯ ನನ್ನ ಬ್ಯಾಂಕ್ ಅಕೌಂಟ್ ನಲ್ಲಿ 24  ಲಕ್ಷ ಇರುಬಹುದು ನನ್ನ ಬ್ಯಾಂಕ್ ಅಕೌಂಟ್ ನಿಂದ ಸಿಎಂ ಪರಿಹಾರ ನಿಧಿಗೆ ಎರಡು ಲಕ್ಷ ಕೊಟ್ಟಿದ್ದೀನಿ ಎಂದು ತಿಳಿಸಿದರು.

ರಾಜ್ಯಕ್ಕೆ ಅನುದಾನ ಮೊದಲು ಬಿಡುಗಡೆ ಮಾಡಲಿ. ಅದನ್ನು ನೋಡಿಕೊಂಡು ನಾನು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಲಿ ಎಂದು ಪ್ರಧಾನಿಗಳಿಗೆ ಮನವಿ ಮಾಡುತ್ತೇನೆ. ಪ್ರವಾಹ ಪರಿಸ್ಥಿತಿ ಕೊಂಚ ಇಳಿದ ಮೇಲೆ ನಾನು ಪ್ರವಾಸ ಮಾಡುತ್ತೇನೆ. ಎಲ್ಲೆಲ್ಲಿ ಏನೇನು ಸಮಸ್ಯೆ ಆಗಿದೆ ಎಂದು ಖುದ್ದಾಗಿ ನಾನು ಭೇಟಿ ಮಾಡುತ್ತೇನೆ. ಎಷ್ಟು ರಸ್ತೆ ಹಾಳಾಗಿದೆ, ಎಷ್ಟು ಸೇತುವೆ, ಮನೆ ಹಾಳಾಗಿದೆ ಖುದ್ದು ಪರಿಶೀಲನೆ ಮಾಡುತ್ತೇನೆ. ಎಲ್ಲ ಭಾಗಗಳಲ್ಲೂ ನಾನು ಪ್ರವಾಸ ಮಾಡುತ್ತೇನೆ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.

ಕುಮಾರಸ್ವಾಮಿ ಆರೋಗ್ಯ ಸರಿ ಇಲ್ದೇ ಇದ್ದರೂ ಪ್ರವಾಹದ ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ.  ಯಡಿಯೂರಪ್ಪ ಮೂರು ಸಾವಿರ ಕೋಟಿ ಕೊಡಿ ಎಂದು ಕೇಳಿದ್ದಾರೆ. ಅನುಭವದ ಮೇಲೆ ನಾನು ಮಧ್ಯಂತರವಾಗಿ 5ಸಾವಿರ ಕೋಟಿ ಕೊಡಲಿ ಎಂದು ಕೇಳಿದ್ದೇನೆ ಎಂದರು.

Key words: former Prime Minister -HD Deve Gowda –neighboring- victims-bangalore