ಉಪಚುನಾವಣೆಯಲ್ಲಿ ಕಾಂಗ್ರೆಸ್  ಜತೆ ದೋಸ್ತಿ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಏನಂದ್ರು ಗೊತ್ತೆ..?

Promotion

ಬೆಂಗಳೂರು,ಸೆ,21,2019(www.justkannada.in):  ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಜತೆ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿರುವ  ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು, ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೇ ಕೈ ಹೈಕಮಾಂಡ್ ಗೆ ಗೊಂದಲ ಆಗಿದೆ. ಇಂಥ ಸಂದರ್ಭದಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ಬಗ್ಗೆ ತೀರ್ಮಾನ ಮಾಡುವ ತಲೆ ನೋವು ಅವರಿಗೆ ಬೇಡ ಎಂದು ನಾವೇ ಮೈತ್ರಿಗೆ ಇತಿಶ್ರೀ ಹಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಬೆಂಗಳೂರಿನ ಜೆಪಿ ಭವನದಲ್ಲಿ ಮಾತನಾಡಿದ  ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ, 15  ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿದೆ.  ಈಗಾಗಲೇ ಎಚ್ ಡಿಕಲೆ ಮೈಸೂರಿನಲ್ಲಿ ತಮ್ಮ ಅನುಭವದಲ್ಲಿ ಎಲ್ಲ ಕಡೆ ಸ್ವತಂತ್ರ ಸ್ಪರ್ಧೆ ಅಂತ ಘೋಷಣೆ ಮಾಡಿದ್ದಾರೆ. 14 ತಿಂಗಳ ಮೈತ್ರಿ ಸರಕಾರದಲ್ಲಿ ಅವರು ನೋವು ಊಟ ಮಾಡಿದ ಹಿನ್ನೆಲೆಯಲ್ಲಿ ಈ ಮಾತು ಹೇಳಿದ್ದಾರೆ. ನಾಳೆ ಪಕ್ಷದ ಹಿರಿಯ ಮುಖಂಡರ ಸಭೆ ಕರೆದಿದ್ದೇನೆ. ಇಲ್ಲಿ ಚರ್ಚೆ ಮಾಡಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡ್ತೀವಿ ಎಂದರು.

ಚುನಾವಣೆ ಇಷ್ಟು ಬೇಗ ಬರುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ.‌ ಸೋಲು ಗೆಲುವು ಆಮೇಲಿನದ್ದು. ಕಾಂಗ್ರೆಸ್ ಸಹವಾಸ ಬೇಡ.ಶಿಕ್ಷೆ ಸಾಕಾಗಿದೆ ಅಂತ ಕಾರ್ಯಕರ್ತರ ಮಾತಿಗೆ ಬೆಲೆ ನೀಡಿ ಸ್ವತಂತ್ರ ಸ್ಪರ್ಧೆ ಮಾಡ್ತೀವಿ ಎಂದರು.

Key words: Former Prime Minister- HD Deve Gowda- – Dosti -Congress – by-election.