ಬಿಜೆಪಿ ಸೇರ್ಪಡೆಯಾದ ಮಾಜಿ ಸಂಸದ ಮುದ್ಧಹನುಮೇಗೌಡ ಮತ್ತು ನಟ ಶಶಿಕುಮಾರ್.

ಬೆಂಗಳೂರು,ನವೆಂಬರ್,3,2022(www.justkannada.in):  ನಟ ಶಶಿಕುಮಾರ್ ಮತ್ತು ಮಾಜಿ ಸಂಸದ ಮುದ್ಧಹನುಮೇಗೌಡ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಶಶಿಕುಮಾರ್ ಮತ್ತು ಮಾಜಿ ಸಂಸದ ಮುದ್ಧಹನುಮೇಗೌಡ  ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಬಿಜೆಪಿ ಸೇರಿದರು. ಇವರಿಗೆ ಕೇಸರಿ ಶಾಲು ಬಿಜೆಪಿ ಭಾವುಟ ನೀಡಿ ಬರ ಮಾಡಿಕೊಂಡರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಹಿನ್ನೆಲೆ  ಮಾಜಿ ಸಂಸದ ಮುದ್ಧಹನುಮೇಗೌಡರಿಗೆ ಟಿಕೆಟ್ ಕೈತಪ್ಪಿತ್ತು. ಹೀಗಾಗಿ ಅಂದಿನಿಂದ ಮುದ್ಧಹನುಮೇಗೌಡ ಕಾಂಗ್ರೆಸ್ ನಲ್ಲಿ ಅಸಮಾಧಾನಗೊಂಡಿದ್ದರು. ಈ ಮಧ್ಯೆ ಶಶಿಕುಮಾರ್ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದಾರೆ.

ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾಯಕರ ಬಿಜೆಪಿ ಸೇರ್ಪಡೆ ರಾಜಕೀಯ ದಿಕ್ಸೂಚಿ.  ಕರ್ನಾಟಕ ರಾಜಕಾರಣ ಹೊಸ ತಿರುವು ಪಡೆದುಕೊಂಡಿದೆ.  ಕಾಂಗ್ರೆಸ್ ಬಹುತೇಕ ಸಚಿವರು ಚುನಾವಣೆಯಲ್ಲಿ ಸೋತಿದ್ದರು. ಶಶಿಕುಮಾರ್ ಸೇರ್ಪಡೆಯಿಂದ ಮತ್ತಷ್ಟು ಬಲ ಸಿಕ್ಕಿದೆ ಎಂದರು.

ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡು ಸೋತಿದೆ.   ಬಿಜೆಪಿ ಜನರಪರ ಕೆಲಸ ಮಾಡುತ್ತಿದೆ. ಸ್ಥಾನಮಾನದ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಪಕ್ಷ ತೀರ್ಮಾನಕ್ಕೆ ಬದ್ಧರಾಗಿರಬೇಕು. ನಾವು ನಿಮ್ಮನ್ನ ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ಪಕ್ಷ ಸೇರಿದವರಿಗೆ ಕಿವಿಮಾತು ಹೇಳಿದರು.

Key words: Former MP- Muddhahanumegowda -actor -Shashikumar- joined-BJP.

 

ENGLISH SUMMARY…

Former MP Muddahanumegowda and actor Shashikumar joins BJP
Bengaluru, November 3, 2022 (www.justkannad.in): Popular sandalwood actor Shashikumar and former MP Muddahanumegowda joined the BJP today officially.
Shashikumar and the former MP Muddahanumegowda and retired IAS officer Anil Kumar was inducted into the BJP in the presence of Chief Minister Basavaraj Bommai, BJP State President Nalin Kumar Kateel, at the BJP office in Bengaluru today. They were welcomed with a saffron shawl and BJP flag.
Former MP Muddahanumegowda was refused the ticket during the last Lok Sabha elections due to the JDS and Congress alliance. He was disgruntled in the Congress since then. In the meantime actor Shashikumar quit the JDS and joined the BJP.
Speaking on the occasion, Chief Minister Basavaraj Bommai expressed his view that the leaders joining the BJP is a political direction. “The Karnataka politics has taken a new turn. Almost all the Congress Ministers had lost during the last elections. The BJP’s strength has increased due to the joining of Shashikumar,” he said.
Keywords: Chief Minister Basavaraj Bommai/ Shashikumar/ Muddahanumegowda/ BJP