ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಮತ್ತೆ ವಾಗ್ದಾಳಿ ನಡೆಸಿದ ಮಾಜಿ ಸಚಿವ ರೋಷನ್ ಬೇಗ್…

ಬೆಂಗಳೂರು,ಜೂ,4,2019(www.justkannada.in):  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ.

ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಅಂತಿದ್ರಲ್ಲಾ ಈಗಲಾದರೂ ಇಳಿದು ಬಾ ಇಳಿದು ಬಾ ಎಂದು ಸಿದ್ದರಾಮಯ್ಯ ಸ್ಟೈಲ್ ನಲ್ಲೇ  ರೋಷನ್ ಬೇಗ್ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾತನಾಡಿದ  ರೋಷನ್ ಬೇಗ್, ಸಿದ್ದರಾಮಯ್ಯಗೆ ನಂದೇ ನಡೆಯಬೇಕು. ನಾನೇ ಹೇಳಿದ ಹಾಗೇ ನಡೆಯಬೇಕು ಅನ್ನೋ ಇಗೋ ಇದೆ. ಅವರಪ್ಪರಾಣೆ ಸಿಎಂ ಆಗಲ್ಲ ಅಂತ ಹೇಳಿ ಕುಮಾರಸ್ವಾಮಿಯನ್ನ ಸಿಎಂ ಮಾಡಿದ್ರಲ್ಲಾ ಎಂದು ಲೇವಡಿ ಮಾಡಿದರು.

ನಾನು ಯಾವುದೇ ನೋಟೀಸ್ ಗೂ ಉತ್ತರ ಕೊಡಲ್ಲ. ಪಕ್ಷ ಬಿಡುವುದು ಇಲ್ಲ, ಬೇರೆ ಪಕ್ಷ ಸೇರುವುದೂ ಇಲ್ಲ. ನನ್ನ ಸ್ನೇಹಿತ ರಾಮಲಿಂಗಾ ರೆಡ್ಡಿ ಜೊತೆ ನಾನಿದ್ದೇನೆ. ಈ ಸರ್ಕಾರದಲ್ಲಿ ಥೂ…ಥೂ …ಥೂ ನಾನು ಮಂತ್ರಿ ಆಗಲ್ಲ. ರಾಮಲಿಂಗರೆಡ್ಡಿ, ಎಚ್.ಕೆ ಪಾಟೀಲರನ್ನ ಮಂತ್ರಿ ಮಾಡ್ಲಿ ಎಂದು ಮಾಜಿ ಸಚಿವ ರೋಷನ್ ಬೇಗ್ ಆಕ್ರೋಶ ವ್ಯಕ್ತಪಡಿಸಿದರು.

ದಿನೇಶ್ ಗುಂಡೂರಾವ್ ದು ಇನ್ ಮೆಚ್ಯೂರ್ ,ಫ್ಲಾಫ್ ಶೋ  ಇವರೆಲ್ಲ ಪದವಿಗೆ ರಾಜೀನಾಮೆ ಕೊಡಲಿ ಆಮೇಲೆ ಪಕ್ಷ ಕಟ್ಟೋಣ ಎಂದು ಕಿಡಿಕಾರಿದ ರೋಷನ್ ಬೇಗ್, ಇಂತಹ ನಾಯಕರು ಮಿಸ್ ಲೀಡ್ ಮಾಡಿದ್ರು. ರಾಹುಲ್ ರಂತನಾಯಕರನ್ನೇ ಮಿಸ್ ಗೈಡ್ ಮಾಡಿದ್ರು.ಐ ಆ್ಯಮ್ ಸರಿ ರಾಹುಲ್ ಗಾಂಧಿ ಸರ್ ಎಂದು ಬೇಸರ ವ್ಯಕ್ತಪಡಿಸಿದರು.

ಹೊಸಬರ ಹೆಸರಿನಲ್ಲಿ ಹಿರಿಯರನ್ನ ಮೂಲೆಗುಂಪು ಮಾಡ್ತಿದ್ದಾರೆ- ಮಾಜಿ ಸಚಿವ ರಾಮಲಿಂಗರೆಡ್ಡಿ ಆಕ್ರೋಶ…

ಹಾಗೆಯೇ ಕಾಂಗ್ರೆಸ್ ನಾಯಕರ ವಿರುದ್ದ ಅಸಮಾಧಾನ ಹೊರ ಹಾಕಿರುವ ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗರೆಡ್ಡಿ , ಪಕ್ಷದಲ್ಲಿ ಹಿರಿಯರನ್ನ ಕಡೆಗಣಿಸಲಾಗ್ತಿದೆ. ಹೊಸಬರ ಹೆಸರಿನಲ್ಲಿ ಮೂಲೆಗುಂಪು ಮಾಡ್ತಿದ್ದಾರೆ. ಹೋಗಲಿ ನನ್ನಂತ ಹಿರಿಯರು ಸಂಪುಟದಲ್ಲಿ ಇಲ್ಲವೇ ಅವರಿಗೆ ಯಾಕೆ ಅವಕಾಶ ಮಾಡಿಕೊಟ್ಟಿದ್ದು. ಹಿರಿಯರಿಗೆ ಬೇಡ ಅಂದರೆ ಅವರಿಗೂ ನೀಡಬಾರದಿತ್ತು ಜಾರ್ಜ್, ದೇಶಪಾಂಡೆಯಂತವರು ಸಂಪುಟದಲ್ಲಿ ಇಲ್ವಾ. ನಮಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

ಪಕ್ಷವನ್ನ ಹಲವು ವರ್ಷಗಳಿಂದ ಸಂಘಟಿಸಿದವನು ನಾನು. ನಾನೇನು ಸಚಿವ ಸ್ಥಾನಕ್ಕೆ ಬ್ಲಾಕ್ ಮೇಲ್ ಮಾಡ್ತಿಲ್ಲ.ಅವರಾಗಿಯೇ ಗುರ್ತಿಸಿ ನೀಡಬೇಕಿತ್ತು. ಕಳೆದ ಭಾರಿಯೂ ಮುಂದೆ ನೀಡ್ತೇವೆ ಅಂತ ಹೇಳಿದ್ರು. ಈಗ ಪಕ್ಷೇತರರಿಗೆ ನೀಡೋಕೆ ಮುಂದಾಗಿದ್ದಾರೆ. ಬಿಜೆಪಿ ಪರವಾಗಿ ಕೆಲಸ ಮಾಡಿದವರಿಗೆ ನೀಡ್ತಿದ್ದಾರೆ.ಹೀಗೆ ಮಾಡಿದ್ರೆ ಯಾರು ಸುಮ್ಮನಿರ್ತಾರೆ. ಲೋಕಸಭೆ ಚುನಾವಣೆ ಸೋಲಿಗೆ ಇದೇ ಕಾರಣ. ಹಿರಿಯರನ್ನ ಕಡೆಗಣಿಸಿದ್ದೇ ಸೋಲಿಗೆ ಕಾರಣ. ಬಿ.ಕೆ.ಹರಿಪ್ರಸಾದ್ ಗೆ ಟಿಕೆಟ್ ಕೊಟ್ಟಿದ್ದಕ್ಕೆ ಬೇಸರವಾಗಿಲ್ಲ.ನಮ್ಮ ಬೆಂಬಲಿಗರು ಪ್ರತಿಭಟನೆಗೆ ನಾನು ಹೇಳಿಲ್ಲ. ಅವರಾಗಿಯೇ ಮಾಡ್ತಿದ್ದಾರೆ ಅದಕ್ಕೆ ನಾನೇನು ಹೇಳೋದು ಎಂದರು.

Key words:  Former minister Roshan Baig expressed displeasure over former CM Siddaramaiah

#Bangalore #RoshanBaig #expressed #displeasure #Siddaramaiah