ಮಾಜಿ ಸಚಿವ ರೋಷನ್ ಬೇಗ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು,ನವೆಂಬರ್,23,2020(www.justkannada.in): ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಬಿಐನಿಂದ ಬಂಧಿತರಾಗಿ ಜೈಲು ಸೇರಿರುವ ಮಾಜಿ ಸಚಿವ ರೋಷನ್ ಬೇಗ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.kannada-journalist-media-fourth-estate-under-loss

ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್  36ನೇ ಆರೋಪಿಯಾಗಿದ್ದು, ರೋಷನ್ ಬೇಗ್ ಅವರ ಪರ ವಕೀಲರು ಜಾಮೀನು ಕೋರಿ ಇಂದು ಸಿಬಿಐ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನು ಜಾಮೀನು ಅರ್ಜಿ ವಿಚಾರಣೆಯನ್ನ ನವೆಂಬರ್ 25ಕ್ಕೆ ಸಿಬಿಐ ಕೋರ್ಟ್ ನಿಗದಿ ಮಾಡಿದೆ. ಜತೆಗೆ  ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸಿಬಿಐಗೆ ಕೋರ್ಟ್ ಸೂಚನೆ ನೀಡಿದೆ.former-minister-roshan-baig-bail-application-hearing-may-25

ರೋಷನ್ ಬೇಗ್ ಅವರ ನಿವಾಸದ ಮೇಲೆ ಸಿಬಿಐ ದಾಳಿ. ..

​ಇಂದು ಬೆಳಿಗ್ಗೆ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ರೋಷನ್ ಬೇಗ್ ಅವರ ಮನೆ ಮೇಲೆ  ದಾಳಿ ನಡೆಸಿದ್ದರು. ಬೆಂಗಳೂರಿನ  ಕೋಲ್ಸ್​ ಪಾರ್ಕ್​ನಲ್ಲಿರುವ ರೋಷನ್ ಬೇಗ್ ಮನೆ ಮೇಲೆ ದಾಳಿ ನಡೆಸಿದ್ದ 13 ಮಂದಿ ಅಧಿಕಾರಿಗಳು  ದಾಖಲೆಗಳ ಪರಿಶೀಲನೆ ನಡೆಸಿದರ. ನಂತರ ಕೆಲ ದಾಖಲೆಗಳನ್ನ ವಶಕ್ಕೆ ಪಡೆದು ತೆರಳಿದ್ದಾರೆ ಎನ್ನಲಾಗಿದೆ.

Key words: Former Minister -Roshan Baig- bail application- hearing-May 25.