ನಾನು ತಪ್ಪುಮಾಡಿದ್ದರೇ ದೇವರು ಶಿಕ್ಷೆ ನೀಡಲಿ: ಯಾವುದೇ ಕಳಂಕ ಇಲ್ಲದೇ ಹೊರಬರುತ್ತೇನೆ- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

ಬಾಗಲಕೋಟೆ.ಮೇ,26,2022(www.justkannada.in): ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಿಲುಕಿ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಎಸ್ ಈಶ್ವರಪ್ಪ, ಯಾವುದೇ ಕಳಂಕ ಇಲ್ಲದೇ ಹೊರಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ನಾನು ತಪ್ಪುಮಾಡಿದ್ದರೇ ದೇವರು ಶಿಕ್ಷೆ ನೀಡಲಿ. 15 ದಿನಗಳಲ್ಲಿ ಎಲ್ಲವೂ ತಿಳಿಯಲಿದೆ. ಯಾವುದೇ ಕಳಂಕ ಇಲ್ಲದೇ ಹೊರಬರುತ್ತೇನೆ. ನನ್ನನ್ನು ಸಂಪುಟಕ್ಕೆ ಸೇರಿಸೋದು ಹೈಕಮಾಂಡ್  ನಿರ್ಧಾರ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ.  ನಾವು ಸೀಟಿಗಾಗಿ ಬಡಿದಾಡಲ್ಲ ಕೇಂದ್ರ ನಾಯಕರ ತೀರ್ಮಾನಕ್ಕೆ ಬದ್ಧ ಎಂದರು.

ಹೆಡ್ಗೆವಾರ್ ಬಗ್ಗೆ ಪಠ್ಯ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಪಠ್ಯದಲ್ಲಿ ಹೆಡ್ಗೆವಾರ್  ಭಾಷಣದ  ಒಂದು ಅಂಶ ಸೇರಿಸಲಾಗಿದೆ.  ಮಹಮದ್ ಆಲಿ ಜಿನ್ನಾ, ಶಿವಲಿಂಗ ಒಡೆದ ಔರಂಗಜೇಬ್ ನ ಹೆಸರು ಸೇರಿಸಬೇಕಿತ್ತಾ..? ದೇಶ ಹಾಳು ಮಾಡಿದವರನ್ನ ವೈಭವೀಕರಿಸಲಾಗಿದೆ. ಪಠ್ಯದಲ್ಲಿ ದೇಶದ ಸಂಸ್ಕೃತಿಯನ್ನ ಒಡೆದವರನ್ನ ವೈಭವೀಕರಿಸಲಾಗುತ್ತಿತ್ತು ಎಂದು ಕಿಡಿಕಾರಿದರು.

Key words:   Former minister- KS Eshwarappa-Contractor-Santosh’s –suicide- case.