ಬಳ್ಳಾರಿಯಲ್ಲಿ ನಾನು ಅಶಾಂತಿ ನಿರ್ಮಿಸಲು ಬಂದಿಲ್ಲ: ಎಲ್ಲಿದ್ದೀಯಾ ಸೋಮಶೇಖರ್ ಬಾರಪ್ಪ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿ…

Promotion

ಬಳ್ಳಾರಿ,ಜ,13,2020(www.justkannada.in):  ಶಾಸಕ ಸೋಮಶೇಖರ್ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗೆ ಮುಂದಾಗಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ರನ್ನ ಪೊಲೀಸರು ವಶಕ್ಕೆ ಪಡೆದು ತೋರಣಗಲ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಬಳ್ಳಾರಿ ನಗರದ ಹೊರವಲಯ ಹೊಸಪೇಟೆ ರಸ್ತೆಯ ಕಂಟ್ರಿಕ್ಲಬ್ ಬಳಿ ಪ್ರತಿಭಟನೆಗೆ ತೆರಳುತ್ತಿದ್ದ ಶಾಸಕ ಜಮೀರ್ ಅಹ್ಮದ್ ಖಾನ್ ರನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಇದೇ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಬೆಂಬಲಿಗರು ಪೊಲೀಸರ ವಾಹನಕ್ಕೆ ಮುತ್ತಿಗೆ ಹಾಕಿದ ಘಟನೆ ನಡೆಯಿತು.

ಈ ಮಧ್ಯೆ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್, ಸೋಮಶೇಖರ್ ನಿನ್ನ ಜಿಲ್ಲೆ ಬಳ್ಳಾರಿಗೆ ಬಂದಿದ್ದೇನೆ. ಉಫ್ ಎಂದರೇ ಹಾರಿ ಹೋಗ್ತಾರೆ ಅಂದರಲ್ಲ. ಎಲ್ಲಿದಿಯಪ್ಪ ಸೋಮಶೇಖರ್ ನಾನು ಬಂದಿದ್ದೇನೆ ಬಾರಪ್ಪ ಎಂದು ಹೇಳಿದರು. ಬಳ್ಳಾರಿಯಲ್ಲಿ ನಾನು ಅಶಾಂತಿ ನಿರ್ಮಿಸಲು ಬಂದಿಲ್ಲ. ನಾನು ಪಾದಯಾತ್ರೆ ಮೂಲಕವೇ ತೆರಳುತ್ತೇನೆ. ಬೇಕಿದ್ದರೇ ಗೋಲಿಬಾರ್ ಮಾಡಿ ಸಾಯಿಸಲಿ ಎಂದು ಜಮೀರ್ ತಿಳಿಸಿದರು.

Key words: Former Minister -Jameer Ahmad Khan –ballari-bjp mla-Somasekhar