ಅಧಿವೇಶನಕ್ಕೆ ಮಾಧ್ಯಮ ಕ್ಯಾಮರಾಗಳನ್ನ ನಿರ್ಬಂಧಿಸಿರುವುದಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಕ್ರೋಶ…

ಬೆಂಗಳೂರು,ಫೆ,14,2020(www.justkannada.in): ರಾಜ್ಯ ವಿಧಾನಮಂಡಲ ಅಧಿವೇಶನಕ್ಕೆ ಮಾಧ್ಯಮ ಕ್ಯಾಮರಾಗಳನ್ನ ನಿರ್ಬಂಧಿಸಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ಧಾರಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಹೆಚ್.ಡಿ ರೇವಣ್ಣ,  ಅಧಿವೇಶನಕ್ಕೆ ಮಾಧ್ಯಮಗಳನ್ನ ಏಕೆ ನಿರ್ಬಂಧಿಸಲಾಗಿದೆ. ಅಧಿವೇಶನಕ್ಕೆ ಮಾಧ್ಯಮಗಳ ಕ್ಯಾಮರಾಗೆ ಕಡಿವಾಣ ಹಾಕ್ತೇವೆ ಅಂದ್ರೆ ಅದು ಸರಿಯಲ್ಲ. ಟೀಕೆ ಟಿಪ್ಪಣಿ ಇರುತ್ತದೆ. ಹೀಗಾಗಿ ಮಾಧ್ಯಮಗಳಿಗೆ ನಿರ್ಬಂಧ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾರ ಮಾತು ಕೇಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೀಗೆ ಮಾಡಿದ್ರೋ ಗೊತ್ತಿಲ್ಲ. ಬಿಎಸಿ ಸಭೆಯಲ್ಲಿ ಇದನ್ನ ಪ್ರಸ್ತಾಪಿಸಯತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ  ಹೇಳಿದರು. ಇಂದು ಬೆಳಿಗ್ಗೆ ಮಾಧ್ಯಮಗಳ ನಿರ್ಬಂಧ ಕುರಿತು ಮಾತನಾಡಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಬಾರಿಯೂ ಅಧಿವೇಶನಕ್ಕೆ ಮಾಧ್ಯಮಗಳ ಕ್ಯಾಮರಾಗಳಿಗೆ ನಿಷೇಧ ಹೇರಲಾಗಿದೆ. ಮಾಧ್ಯಮಗಳ ಕ್ಯಾಮರಾಗಳಿಗೆ ಅನುಮತಿ ಇಲ್ಲ. ಈ ಹಿಂದೆ ಪ್ರಾಯೋಗಿಕವಾಗಿ ನಿಷೇಧ ಹೇರಿದ್ದವು. ಈಗ ಸಂಪೂರ್ಣವಾಗಿ ಅನುಸ್ಪಾನ ತರಲಾಗುತ್ತದೆ. ಲೋಕಸಭೆ ಮತ್ತು ರಾಜ್ಯಸಭೆ ಮಾದರಿಯ ವ್ಯವಸ್ಥೆ ಇಲ್ಲೂ ಪಾಲಿಸಲಾಗುತ್ತದೆ ಎಂದು ತಿಳಿಸಿದ್ದರು.

Key words: Former minister -HD Revanna- outrage – Restriction- media camera -session