ಉಪಚುನಾವಣೆಯಲ್ಲಿ ಮಾಜಿ ಸಚಿವ ಜಿ.ಟಿ ದೇವೇಗೌಡ ತಟಸ್ಥ ವಿಚಾರ ಮನವೊಲಿಕೆ ಕುರಿತು ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ…?

kannada t-shirts

ಮೈಸೂರು,ನ,21,2019(www.justkannada.in):  ರಾಜ್ಯದ 15 ಕ್ಷೇತ್ರಗಳ ಉಪಚುನಾವಣಾ ಕಣ ರಂಗೇರಿದ್ದು ಮೂರು ಪಕ್ಷದ ನಾಯಕರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಜೆಡಿಎಸ್ ಕಾರ್ಯಕ್ರಮಗಳಿಂದ ದೂರ ಉಳಿದಿರುವ ಮಾಜಿ ಸಚಿವ ಜಿ.ಟಿ ದೇವೇಗೌಡರು ಇದೀಗ ಹುಣಸೂರು ಉಪಚುನಾವಣೆಯಲ್ಲಿ ತಟಸ್ಥರಾಗಿದ್ದಾರೆ. ಈ ಮಧ್ಯೆ ಜಿ.ಟಿ ದೇವೇಗೌಡರು ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುತ್ತಾರೆಯೇ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಮಾಜಿ ಸಚಿವ ಜಿ.ಟಿ.ಡಿ ತಟಸ್ಥತೆ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಜಿಟಿ ದೇವೇಗೌಡರೊಂದಿಗೆ ಮಾತನಾಡುತ್ತೇನೆಂದು ಹೇಳಿದ್ದೇನೆ. ಅವರ ಮನವೊಲಿಸುತ್ತೇನೆ ಎಂದು ಹೇಳಿಲ್ಲ. ಜಿಟಿಡಿ ಮನಸ್ಥಿತಿ ನೋಡಿ ಮಾತನಾಡ್ತಿನಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಪಾರದರ್ಶಕ ಚುನಾವಣೆ ನಡೆಯುವ ಬಗ್ಗೆ ಅನುಮಾನವಿದೆ. ಜನರಿಗೆ ಸೀರೆ, ಕುಕ್ಕರ್, ಫ್ರೀಜ್ಡ್ ಕೊಡ್ತಿದ್ದಾರೆ. ಉಪಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ. ಅನರ್ಹರು ಮಾರಾಟವಾದ ದುಡ್ಡನ್ನು ಜನರಿಗೆ ಹಂಚುತ್ತಿದ್ಧಾರೆ. ಇಲ್ಲಿ ಪಾರದರ್ಶಕತೆ ಎಲ್ಲಿಂದ ಬಂತು..? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ಮಾಧುಸ್ವಾಮಿ ವಿರುದ್ಧ ಹುಳಿಯಾರಿನಲ್ಲಿ  ಕುರುಬ ಸಮುದಾಯ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಮಾಧುಸ್ವಾಮಿ ಕ್ಷಮೆ ಕೇಳಲಿಲ್ಲ. ಯಡಿಯೂರಪ್ಪನೇ ಕ್ಷಮೆ ಕೇಳಿದ್ಮೇಲೆ ಮಾಧುಸ್ವಾಮಿ ಕೇಳಬೇಕಿತ್ತು. ಇದನ್ನು ಇಲ್ಲಿಗೆ ಮುಕ್ತಾಯ ಮಾಡಬೇಕಿತ್ತು, ಇದಕ್ಕೆ ಜಾತಿ ಬಣ್ಣ ಕಟ್ಟುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: Former Minister -GT Deve Gowda – by-election- mysore- former cm-Siddaramaiah

website developers in mysore