ಕೊರೋನಾ ಕಾಲರ್ ಟ್ಯೂನ್ ಬಗ್ಗೆ ವ್ಯಂಗ್ಯವಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್…

ಬೆಂಗಳೂರು,ಮಾ,10,2020(www.justkannada.in):  ವಿಶ್ವದಾದ್ಯಂತ ಹರಡಿರುವ ಮಾರಕ ಕೊರೋನಾ ವೈರಸ್ ಬಗ್ಗೆ ಮೊಬೈಲ್ ಫೋನ್ ಕಾಲರ್ ಟ್ಯೂನ್ ನಲ್ಲಿ ಅರಿವು ಮೂಡಿಸಲಾಗುತ್ತಿದ್ದು  ಈ ಬಗ್ಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಸರ್ಕಾರ ಕೊರೋನಾ ವೈರಸ್ ಬಗ್ಗೆ  ಕಾಲರ್  ಟ್ಯೂನ್ ನಲ್ಲಿ ಅರಿವು ಮೂಡಿಸುತ್ತಿರುವ ಬಗ್ಗೆ ಲೇವಡಿ ಮಾಡಿರುವ ಡಿ.ಕೆ ಶಿವಕುಮಾರ್ ಎತ್ತಿಗೆ ಜ್ವರ ಬಂದ್ರೆ ಎಮ್ಮಗೆ ಬರೆ ಹಾಕಿದಂತಿದೆ. ಕೇಂದ್ರ ಸರ್ಕಾರದ ನಿರ್ಧಾರ. ದೇಶದಲ್ಲಿ  ಜನರು ಆತಂಕಗೊಂಡಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ. ಷೇರುಮಾರುಕಟ್ಟೆ ಪಾತಾಳಕ್ಕಿಳಿದಿದೆ. ಇವುಗಳ ಬಗ್ಗೆ ಕ್ರಮ ಕೈಗೊಳ್ಳಬೇಕೇ ಹೊರತು ಜನರನ್ನ ಹೆದರಿಸುವುದಲ್ಲ ಎಂದು ಕಿಡಿಕಾರಿದ್ದಾರೆ.

ಕೊರೋನಾ ವೈರಸ್ ಕುರಿತು ಅರಿವು ಮೂಡಿಸುವ ಸಲುವಾಗಿ ರಿಂಗ್ ಟೋನ್ ಬದಲಿಗೆ ಕೊರೋನಾ ಜಾಗೃತಿ ಕುರಿತ ಸಂದೇಶಗಳನ್ನು ಕಾಲ್ ಟ್ಯೂನ್ ಆಗಿ ಹಾಕುವಂತೆ ಟಲಿಕಾಂ ಇಲಾಖೆ (ಡಿಒಟಿ) ಟೆಲಿಕಾಂ ಆಪರೇಟರ್ ಗಳಿಗೆ ಸೂಚಿಸಿತ್ತು. ಈ ಸೂಚನಯನ್ನು ಈಗಾಗಲೇ ಬಿಎಸ್ಎನ್ಎಲ್, ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು ಅನುಸರಿಸುತ್ತಿವೆ.

Key words: Former Minister -DK Sivakumar – irony – Corona -Collar Tune.