ಪರಮೇಶ್ವರ್ ಸಿಎಂ ಆಗಬೇಕಿತ್ತು: ಸಿದ್ದರಾಮಯ್ಯ ದಲಿತರನ್ನ ತುಳಿಯುತ್ತಿದ್ದಾರೆ- ಸಚಿವ ಶ್ರೀರಾಮುಲು ಕಿಡಿ…

Promotion

ಬೆಂಗಳೂರು,ನ,29,2019(www.justkannada.in): ಸಿದ್ಧರಾಮಯ್ಯ ದಲಿತರನ್ನ ತುಳಿದಿದ್ದಾರೆ. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸಿಎಂ ಆಗಬೇಕಿತ್ತು ಎಂದು ಆರೋಗ್ಯ ಸಚಿವ ಶ್ರೀರಾಮುಲು ಸಿದ್ಧರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಸಚಿವ ಶ್ರೀರಾಮುಲು,  ಸಿದ್ದರಾಮಯ್ಯ ನಂಬಿದವರ ಕತ್ತು ಕೊಯ್ದು ಬಂದಿದ್ದಾರೆ. ಡಾ.ಜಿ. ಪರಮೇಶ್ವರ್ ಸಿಎಂ ಆಗಬೇಕಿತ್ತು. ಆದರೆ ಕೊರಟಗೆರೆಯಲ್ಲಿ ಗೆಲ್ಲದಂತೆ ಮಾಡಿದ್ರು. ಸಿದ್ದರಾಮಯ್ಯ ಜಾತಿ ಹೆಸರು ಹೇಳಿಕೊಂಡು ಎಲ್ಲರನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಪ್ಲಾಫ್ ಶೋ. ಉಪಚುನಾವಣೆ ರಿಸಲ್ಟ್ ಬಳಿಕ ಸಿದ್ದರಾಮಯ್ಯ ವಿಪಕ್ಷ ಸ್ಥಾನದಲ್ಲಿ ಇರಲ್ಲ.  ಅವರು ಸಿಎಂ ಆಗುವ ಕನಸು ನನಸಾಗಲ್ಲ ಎಂದು ಶ್ರೀರಾಮುಲು ವಾಗ್ದಾಳಿ ನಡಸಿದರು.

ಇನ್ನು ಸಚಿವ ವಿ.ಸೋಮಣ್ಣ ಅವರನ್ನ ಬಚ್ಚಾ ಎಂದಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಹರಿಹಾಯ್ದ ಶ್ರೀರಾಮುಲು, ನೀವು ಸಹ ಒಬ್ಬ ಬಚ್ಚ ಆಗಿದ್ರಿ. ಕುಮಾರಸ್ವಾಮಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಜೆಡಿಎಸ್ ನಾಯಕರು ಕಣ್ಣೀರ ನಾಯಕರು ಎಂದು ಲೇವಡಿ ಮಾಡಿದರು.

Key words: Former DCM- Parameshwar –Siddaramaiah-Minister -Sriramulu