ಗುಟ್ಟು ರಟ್ಟಾಗುತ್ತೆ ಅಂತ ಸ್ಯಾಂಟ್ರೊ ರವಿ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ-ಮಾಜಿ ಸಿಎಂ ಸಿದ‍್ಧರಾಮಯ್ಯ ಆರೋಪ.

ಮೈಸೂರು,ಜನವರಿ,21,2023(www.justkannada.in): ಸ್ಯಾಂಟ್ರೊ ರವಿ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುವ ಪ್ರಯತ್ನದಲ್ಲಿ ಮಾಡುತ್ತಿದೆ. ಏಕೆಂದರೆ, ಪ್ರಕರಣ ಬಯಲಾದರೆ, ಅದರಲ್ಲಿರುವ ಬಿಜೆಪಿಯವರ ಗುಟ್ಟು ರಟ್ಟಾಗುತ್ತಲ್ಲ ಅಂತ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸಿಐಡಿ ಏನು ಸ್ವತಂತ್ರ ಸಂಸ್ಥೆಯಲ್ಲ. ಅದೂ ಒಂದು ಕ್ರೈಂಗೆ ಸಂಬಂಧಪಟ್ಟ ಒಂದು ವಿಭಾಗ. ಅದೂ ಕೂಡ ರಾಜ್ಯ ಸರ್ಕಾರದ ಕೈ ಕೆಳಗಿರುವ ಸಂಸ್ಥೆ. ಎಲ್ಲರೂ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. 130 ರಿಂದ 150 ಸೀಟು ಗೆಲ್ಲುತ್ತೇವೆ. ಭ್ರಷ್ಟಾಚಾರದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನ ತೀರ್ಮಾನ ಮಾಡಿದ್ದು, ಯಾರು ಏನೇ ಮಾಡಿದರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದನ್ನ ತಪ್ಪಿಸೋಕಾಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನನ್ನ ಸ್ಪರ್ಧೆ. ನನ್ನ ಸೋಲಿಸಲು ಬಿಜೆಪಿ ಜೆಡಿಎಸ್ ಎರಡು ಪಕ್ಷಗಳು ಪ್ರಯತ್ನ ಮಾಡಿದರೂ ಅಲ್ಲಿ ನಾನೇ ಗೆಲ್ಲೋದು. ಬಾದಾಮಿಯಲ್ಲೂ ಇದೇ ರೀತಿ ಮಾಡಿದರು. ನನ್ನ ಸೋಲಿಸೋಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಶ್ರೀರಾಮುಲುನ ನನ್ನ ವಿರುದ್ಧ ನಿಲ್ಲಿಸಿದ್ರು ಏನಾಯಿತು. ಹಾಗೆ ಕೋಲಾರದಲ್ಲೂ ನನ್ನ ಸೋಲಿಸೋಕೆ ಡಬಲ್ ಇಂಜಿನ್ ಸರ್ಕಾರ, ಜಿಡಿಎಸ್ ಒಳಸಂಚು ಮಾಡುತ್ತದೆ. ಆದರೂ ಅವರೇನೇ ಮಾಡಿದರೂ ನಾನು ಗೆದ್ದು ಬರುವ ವಿಶ್ವಾಸವಿದೆ ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: Former CM-Sidduramaiah- BJP -trying – Santro Ravi- case