ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆಗೆ ಮುಂದಾದ ಸರ್ಕಾರದ ವಿರುದ್ದ ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರ ಹಾಕಿದ ಮಾಜಿ ಸಿಎಂ ಸಿದ್ಧರಾಮಯ್ಯ….

kannada t-shirts

ಬೆಂಗಳೂರು,ಡಿ,18,2019(www.justkannada.in):  ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವ ಹಿನ್ನೆಲೆ ಟ್ವಿಟ್ಟರ್ ನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟಿನ್ ಹೆಸರಿನ ಬದಲು ಮಹರ್ಷಿ ವಾಲ್ಮಿಕಿಯವರ ಹೆಸರಿಡಲು ಮುಂದಾಗಿದೆ. ಹೀಗಾಗಿ ಈ ಕುರಿತು  ಟ್ವಿಟ್ಟರ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ   ಮಾಜಿ ಸಿಎಂ ಸಿದ್ಧರಾಮಯ್ಯ, ಇಂದಿರಾ ಕ್ಯಾಂಟೀನ್ ಗೆ ನಮ್ಮೆಲ್ಲರ ಹೆಮ್ಮೆಯ ಕವಿ ಮಹರ್ಷಿ ವಾಲ್ಮಿಕಿಯವರ ಹೆಸರು ಇಡಲು ಮುಂದಾಗಿದೆ. ಇಂದಿರಾ ಕ್ಯಾಂಟೀನ್ ಗೆ ನಮ್ಮೆಲ್ಲರ ಹೆಮ್ಮೆಯ ಕವಿ ಮಹರ್ಷಿ ವಾಲ್ಮಿಕಿಯವರ ಹೆಸರು ಇಡುವ ಯೋಜನೆ ಇದೆಯಂತೆ. ಮಹರ್ಷಿ ವಾಲ್ಮಿಕಿಯವರ ಬಗ್ಗೆ ನಮಗೆಲ್ಲ ಅಪಾರ ಗೌರವವಿದೆ. ಅವರ ಹೆಸರನ್ನ ತನ್ನ ಕ್ಷುಲ್ಲಕ ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಂಡು ಅವರಿಗೆ ಅವಮಾನ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

ಸಿದ್ಧರಾಮಯ್ಯ ಸಿಎಂ ಆಗಿದ್ದ ವೇಳೆ ಇಂದಿರಾ ಕ್ಯಾಂಟಿನ್ ಯೋಜನೆಯನ್ನ ಜಾರಿಗೆ ತಂದಿದ್ದರು. ಈ ಯೋಜನೆ ಮೂಲಕ ಬಡವರಿಗೆ 10 ರೂ.ಗೆ ಊಟ ನೀಡಲಾಗುತ್ತಿದೆ. ಇನ್ನು ಈ ಯೋಜನೆಗೆ ಮಹರ್ಷಿ ವಾಲ್ಮಿಕಿ ಹೆಸರು ಇಡಲು ಸರ್ಕಾರ ಮುಂದಾಗಿದೆ.

Key words: Former CM –Siddaramaiah-outraged -government -Twitter – Indira Canteen -name change.

website developers in mysore