ಕೈಗಾರಿಕೆಗಳ ಸಂಘದ ಮುಖಂಡರ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಸಭೆ

ಬೆಂಗಳೂರು , ಮೇ 02, 2020 (www.justkannada.in): ಪೀಣ್ಯ ಕೈಗಾರಿಕೆಗಳ ಸಂಘದ ಮುಖಂಡರ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಾಜು, ಪೀಣ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶ್ರೀನಿವಾಸ್, ಕೈಗಾರಿಕೆಗಳ ಮುಖ್ಯಸ್ಥರು,ಪದಾಧಿಕಾರಿಗಳು ಭಾಗಿಯಾಗಿದ್ದರು. ಸಣ್ಣ ಕೈಗಾರಿಕೆಗಳ ಪ್ರಸ್ತುತ ಸಮಸ್ಯೆಗಳ ಬಗ್ಗೆ ಬೆಳಕು ಎಂದು ಪ್ರತಿಪಕ್ಷ ನಾಯಕರ ಗಮನಕ್ಕೆ ತಂದ ಸಂಘದ ಮುಖಂಡರು.

ಲಾಕ್ ಡೌನ್ ಆಗಿ ೪೫ ದಿನಗಳು ಆಯ್ತು. ೪೫ ದಿನಗಳಿಂದ ಸಣ್ಣ ಕೈಗಾರಿಕೆಗಳು ಶಟ್ ಡೌನ್ ಆಗಿವೆ. ಉತ್ಪಾದನೆಯೂ ಇಲ್ಲ,ಮಾರಾಟವೂ ಇಲ್ಲ. ಕಾರ್ಖಾನೆಗಳಿಗೆ ೪೫ ದಿನಗಳಿಂದ ಲಾಭವಿಲ್ಲ,ನಷ್ಟವೇ ಎಲ್ಲ. ಇದ್ರ ಜೊತೆ ಕಾರ್ಮಿಕರಿಗೆ ವೇತನವನ್ನೂ ನೀಡಬೇಕೆಂಬ ಆದೇಶವಿದೆ. ಕಾರ್ಖಾನೆಗಳನ್ನ ನಡೆಸೋದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

ಹೀಗಾಗಿ ನಾವು ಕಾರ್ಮಿಕರ ವೇತನ,ವಿಮೆ ಎಲ್ಲಿಂದ ಕಟ್ಟೋದು? ನಾವು ಕಾರ್ಖಾನೆಗಳನ್ನ ಮುಚ್ಚುವ ಹಂತಕ್ಕೆ ಬಂದಿದ್ದೇವೆ. ಕೇಂದ್ರ,ರಾಜ್ಯ ಸರ್ಕಾರಗಳ ಗಮನಕ್ಕೆ ನಮ್ಮ‌ಸಮಸ್ಯೆ ತನ್ನಿ. ಜೊತೆಗೆ ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ವಿಶೇಷ ಯೋಜನೆ ರೂಪಿಸಬೇಕು. ಶೇ ೪ ರ ಬಡ್ಡಿ ದರದಲ್ಲಿ ಕೈಗಾರಿಕೆಗಳಿಗೆ ಸಾಲಸೌಲಭ್ಯ ಒದಗಿಸಬೇಕು. ಉತ್ಪನ್ನಗಳ ರಫ್ತಿಗೆ ಅವಕಾಶ ಮಾಡಿಕೊಡಬೇಕು. ಸಣ್ಣ ಕೈಗಾರಿಕೆಗಳ ಸಾಲ ಮನ್ನಾ ಮಾಡಬೇಕು. ವಿಮೆ ಸೌಲಭ್ಯವನ್ನ ಸರ್ಕಾರವೇ ತುಂಬಿಕೊಡಬೇಕು. ಈ ಬಗ್ಗೆ ರಾಜ್ಯ,ಕೇಂದ್ರ ಸರ್ಕಾರದ ಗಮನಕ್ಕೆ ತಂದು ನಮ್ಮ‌ಸಮಸ್ಯೆಗಳನ್ನ ಬಗೆಹರಿಸಿಕೊಡಿ ಸಿದ್ದರಾಮಯ್ಯ ಮುಂದೆ ಸಂಘದ ಮುಖಂಡರ ಬೇಡಿಕೆ ಇಟ್ಟರು.