ಉದ್ದೇಶಪೂರ್ವಕವಾಗಿ ನಿಷೇಧಾಜ್ಞೆ ಜಾರಿ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲ- ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ…

ಮಂಗಳೂರು,ಡಿ,23,2019(www.justkannada.in): ರಾಜ್ಯದ ವಿವಿಧೆಡೆ ಉದ್ದೇಶಪೂರ್ವಕವಾಗಿಯೇ ಸರ್ಕಾರ ನಿಷೇಧಾಜ್ಞೆ ಜಾರಿ ಮಾಡಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದರು.

ಮಂಗಳೂರು ಸಿ  ಜನರ ರಾಜ್ಯಸರ್ಕಾರ ಉದ್ದೇಶಪೂರ್ವಕವಾಗಿ ನಿಷೇಧಾಜ್ಞೆ ಹೇರಿದ್ದರು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಬಂದಿದ್ದರು ಎನ್ನುತ್ತಿದ್ದಾರೆ. ಠಾಣೆಯ ದೂರದಲ್ಲಿ ಫೈರಿಂಗ್ ಆಗಿ ಮೃತಪಟ್ಟಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿ ಮಾತನಾಡಿದ ಸಿದ್ದರಾಮಯ್ಯ, ಮಂಗಳೂರಿಗೆ ಸಿಎಂ, ಡಿಸಿಎಂ, ಗೃಹಸಚಿವರು ಭೇಟಿ ನೀಡುತ್ತಾರೆ. ಶೋಭಾ ಕರಂದ್ಲಾಜೆ ಬಂದು ತಪ್ಪು ಮಾಹಿತಿ ನೀಡ್ತಾರೆ. ಇಲ್ಲಿಗೆ ಬರಲು ಶೋಭಾ ಅವರ ಭೇಟಿಗೆ ಅನುಮತಿ ಹೇಗೆ ಸಿಕ್ಕಿತು. ನಾನು ವಿಪಕ್ಷ ನಾಯಕ ನಾನು ಬರಲು ಅನುಮತಿ ನೀಡಲಿಲ್ಲ ಇವರಿಗೆ ಹೇಗೆ ಅನುಮತಿ ನೀಡಿದರು ಎಂದು ಪ್ರಶ್ನಿಸಿದರು.

ಅಲ್ಲದೇ ಯಡಿಯೂರಪ್ಪ ಕಾಲದಲ್ಲೇ ಗೋಲಿಬಾರ್ ನಡೆದಿದೆ. ನಮ್ಮ ಕಾಲದಲ್ಲಿ ಬಂದೂಕು ಮರೆತುಹೋಗಿತ್ತು. ನಮ್ಮ ಕಾಲದಲ್ಲಿ ಯಾಕೆ ಇವೆಲ್ಲಾ ನಡೆದಿಲ್ಲ ರಾಜ್ಯದ ವಿವಿಧೆಡೆ ಸೆಕ್ಷನ್​ 144 ಜಾರಿಯ ಅಗತ್ಯವೇ ಇರಲಿಲ್ಲ ಎಂದು ಹರಿಹಾಯ್ದರು.

Key words: former cm- siddaramaiah-mangalore-outrage-bjp govrnament