ಎಸಿಬಿ ರಚನೆ, ಅರ್ಕಾವತಿ ಡಿನೋಟಿಫಿಕೇಷನ್ ಕುರಿತ ಸಿಎಂ ಬೊಮ್ಮಾಯಿ ಆರೋಪಕ್ಕೆ ತಿರುಗೇಟು ಕೊಟ್ಟ ಮಾಜಿ ಸಿಎಂ ಸಿದ್ಧರಾಮಯ್ಯ.

kannada t-shirts

ಬೆಂಗಳೂರು,ಫೆಬ್ರವರಿ,24,2023(www.justkannada.in): ಎಸಿಬಿ ರಚನೆ ಮತ್ತು ಅರ್ಕಾವತಿ ಡಿನೋಟಿಫಿಕೇಷನ್ ಕುರಿತು  ಸದನದಲ್ಲಿ ತಮ್ಮ ಮೇಲೆ ಆರೋಪ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನ ನಿವಾಸದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿದ್ಧರಾಮಯ್ಯ, ನಿನ್ನೆ ಸದನದಲ್ಲಿ ಬಜೆಟ್ ವೇಳೆ ಚರ್ಚೆಗೆ ಸಿಎಂ  ಬಸವರಾಜ ಬೊಮ್ಮಾಯಿ ಉತ್ತರ  ನೀಡಿದ್ದಾರೆ ಕೆಲವು ವಿಚಾರ ಬಗ್ಗೆ ವಿರಾವೇಷದಿಂದ ಉತ್ತರ ಕೊಟ್ಟಿದ್ದಾರೆ. ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಎಸಿಬಿ ರಚನೆ ಮಾಡಿ ಲೋಕಾಯುಕ್ತ  ಸಂಸ್ಥೆ ಮುಚ್ಚಿದ್ದಾರೆಂದು ಆರೋಪ ಮಾಡಿದ್ದಾರೆ. ಸಿಎಂ ಆಗಿರುವವರಿಗೆ ಕಾನೂನು ಜ್ಞಾನ ಇದೆ ಅಂದುಕೊಂಡಿದ್ದೀನಿ ದೇಶದ 16 ರಾಜ್ಯಗಳಲ್ಲಿ ಎಸಿಬಿ ಲೋಕಾಯುಕ್ತ ಎರಡು ಇದೆ. ಬಿಹೆಪಿ ಆಡಳಿತವಿರುವ ಯುಪಿಯಲ್ಲೂ ಎಸಿಬಿ ಇದೆ. ಇದನ್ನ ಅವರ ಅಡ್ವಕೇಟ್ ಜನರಲ್ ನಾವದಗಿ ಹೇಳಿದ್ದಾರೆ ಕೋರ್ಟ್ ನಲ್ಲಿ ವಾದ ಮಂಡಿಸುವಾಗ ಹೇಳಿದ್ದಾರೆ. ಸರ್ಕಾರದ ನಿಲುವುನ್ನ ಕೋರ್ಟ್ ನಲ್ಲಿ ಎಜಿ ವ್ಯಕ್ತಪಡಿಸಿದ್ದಾರೆ.  2016ರಲ್ಲಿ ನಾವು ಎಸಿಬಿ ರಚನೆ ಮಾಡಿದವು ಬೊಮ್ಮಾಯಿ ಸುಳ್ಳು ಹೇಳಿದ್ದಾರೆ.  ಕಾಂಗ್ರೆಸ್ ಅವಧಿಯ ಭ್ರಷ್ಟಾಚಾರ ಮುಚ್ಚಕೊಳ್ಳಲು ಎಸಿಬಿ ರಚನೆ ಅಂತಾ ಸುಳ್ಳು ಹೇಳಿದ್ದಾರೆ.  1984 ಕಾಯ್ದೆಯನ್ವಯ ಲೋಕಾಯುಕ್ತ ರಚನೆಯಾಗಿದೆ. ಹಾಲಿ ಸರ್ಕಾರ ಭ್ರಷ್ಟಾಚಾರ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ನಾನು ತಿನ್ನಲ್ಲ ತಿನ್ನಲು ಬಿಡಲ್ಲ ಎಂದು ಮೋದಿ ಹೇಳಿದ್ದಾರೆ. ಆದರೆ ಭ್ರಷ್ಟಾಚಾರ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ಧರಾಮಯ್ಯ 852 ಎಕರೆ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಯಾವುದೇ ದಾಖಲೆ ಇಲ್ಲದೆ ಸಿಎಂ  ಬೊಮ್ಮಾಯಿಆರೋಪ ಮಾಡಿದ್ದಾರೆ.  2003ರಲ್ಲಿ ಅರ್ಕಾವತಿ ಬಡವಾಣೆ ನಿರ್ಮಾಣವಾಗಿತ್ತು 1919 ಎಕರೆ 13 ಗುಂಟೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣವಾಗಿತ್ತು ಅರ್ಕಾವತಿ ಬಡವಾಣೆ ಡಿನೋಟಿಫಿಕೇಷನ್ ಮಾಡಿದ್ದರು ಡಿನೋಟಿಫಿಕೇಷನ್ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು.  ಸುಪ್ರೀಂ ಆದೇಶದ ಮೇಲೆ ಕಮಿಟಿ ರಚನೆ ಮಾಡಲಾಗಿತ್ತು. ನಾವು ಅಧಿಕಾರ  ಬರುವ ಮುನ್ನವೇ ಇದೆಲ್ಲ ನಡೆದಿತ್ತು. ಆಗ ಸಿಎಂ ಜಗದೀಶ್ ಶೆಟ್ಟರ್ ಗೆ ಫೈಲ್ ಹೋಗಿತ್ತು. ನೀತಿ ಸಂಹಿತಿ  ಹಿನ್ನೆಲೆ ಫೈಲ್ ವಾಪಸ್ ಕಳಿಸಿದ್ದರು ನಾನು ಅಧಿಕಾರಕ್ಕೆ ಬಂಧ ನಂತರ ನನ್ನ ಬಳಿಗೆ ಫೈಲ್ ಬಂದಿತು ಸುಪ್ರೀಂಕೋರ್ಟ್ ಆದೇಶದಂತೆ ಮರುಪರಿಶೀಲನೆ ಮಾಡಿದ್ದಾರೆ. ವರದಿ ನ್ಯಾಯಯುತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಅಧಿಕಾರಿಗಳ ಮಾಹಿತಿ ಮೇರೆಗೆ  ಫೈಲ್ ಮೇಲೆ ನಾನು ಅನುಮೋದಿಸಲಾಗಿದೆ ಎಂದು ಕನ್ನಡದಲ್ಲಿ ಬರೆದಿದ್ದೆ ಎಂದು ಮಾಹಿತಿ ನೀಡಿದರು.

ನಾನು ಅಧಿಕಾರಕ್ಕೆ ಬರುವ ಮುನ್ನ ಅರ್ಕಾವತಿ ಡಿನೋಟಿಫೈ ಆಗಿತ್ತು.  ನಾನು ಯಾವುದೇ ಡಿನೋಟಿಫಿಕೇಷನ್ ಮಾಡಿರಲಿಲ್ಲ. ವಿಧಾನಸಭೆಯಲ್ಲಿ ನಿನ್ನೆ ಸಿಎಂ ತಪ್ಪು ಮಾಹಿತಿ ನೀಡಿದ್ದಾರೆ. ಪಿಎಸ್ ಐ ಹಗರಣ ಬಿಟ್ ಕಾಯಿನ್ ಹಗರಣ ಮುಚ್ಚಿ ಹಾಕಿಕೊಳ್ಳಲು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ದ ಸಿಎಂ ಬಿಜೆಪಿ ಸುಳ್ಳು ಆರೋಪ ಮಾಢಿದ್ದಾರೆ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

Key words: Former CM -Siddaramaiah – CM Bommai- allegations –ACB- formation-, Arkavati denotification.

website developers in mysore