ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ…

Promotion

ಮೈಸೂರು,ಜು,4,2019(www.justkannada.in): 6 ತಿಂಗಳು ಜೆಡಿಎಸ್ ಅಧ್ಯಕ್ಷ ಸ್ಥಾನ ನಿರ್ವಹಿಸದೆ ರಿಜೈನ್ ಮಾಡಿದ್ದಾರೆ. ಇನ್ನು ಬೇರೆಯವ ಬಗ್ಗೆ ಏನು ಮಾತಾಡ್ತಾನೆ ಎಂದು ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಮೈತ್ರಿ ಮುನ್ನೆಡುಸುವಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ವಿಫ‌ಲರಾಗಿದ್ದಾರೆ ಎಂಬ ಹೆಚ್.ವಿಶ್ವನಾಥ್ ಅವರ ಹೇಳಿಕೆ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ,  ನೆಟ್ಟಗೆ 6 ತಿಂಗಳು ರಾಜ್ಯಾಧ್ಯಕ್ಷ ಸ್ಥಾನ ನಿರ್ವಹಿಸಲು ಆಗಿಲ್ಲ. ಅಧ್ಯಕ್ಷನಾಗಿ ಎಷ್ಟು ದಿನ ಆಯ್ತು ಅವ್ನು, ಬೇರೆಯವರ ಬಗ್ಗೆ ಅವನೇನ್ರಿ ಮಾತನಾಡೋದು. ಅವರ ಮಾತಿಗೆ ಏನಂಥ ಪ್ರತಿಕ್ರಿಯೆ ನೀಡೋದು ಎಂದು ಕಿಡಿಕಾರಿದರು.

ಇದೇ ವೇಳೆ ಸಚಿವ ಜಿ.ಟಿ ದೇವೇಗೌಡರಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು ಮೋದಿ ಜೊತೆಗೂ ಮಾತನಾಡಿಲ್ಲ ಅಮಿತ್ ಶಾ ಜತೆಗೂ ಮಾತನಾಡಿಲ್ಲ. ಹೀಗಾಗಿ ಅಪರೇಷನ್ ಕಮಲ ಮಾಡ್ತಿಲ್ಲ ಎಂದು ನಾನು ಹೇಳಲ್ಲ.  ಜಿಟಿಡಿಗೆ ಏನ್ ಮಾಹಿತಿ ಇದೆಯೋ ಗೊತ್ತಿಲ್ಲ ಎಂದು ಟಾಂಗ್ ನೀಡಿದರು. ಜೆಡಿಎಸ್ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ  ಕೋಟಿ ಕೋಟಿ ಆಫರ್ ನೀಡಿರುವುದು ನಿಜ.  ಶಾಸಕರ ಖರೀದಿಗೆ ಮುಂದಾಗಿ ವಿಫಲರಾಗಿರುವುದು ಸತ್ಯ. ಏನೇ ಆದ್ರು ಮೈತ್ರಿ ಸರ್ಕಾರ ಕಲ್ಲು ಬಂಡೆಯಂತೆ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: former CM – Siddaramaiah – against -H.Vishwanath-mysore