ಮಾಜಿ ಸಿಎಂ ಹೆಚ್.ಡಿಕೆ ಹೇಳಿಕೆಗೆ ಕಿಡಿ: ಭಯೋತ್ಪಾದಕ ಕೃತ್ಯ ತಡೆಯಲು ಮೂರು ಪಕ್ಷಗಳು ಒಂದಾಗಬೇಕು ಎಂದ ಸಚಿವ ಕೆ.ಎಸ್ ಈಶ್ವರಪ್ಪ…

ಹಾಸನ,ಜ,22,2020(www.justkannada.in): ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆ ಪ್ರಕರಣ ಸಂಬಂಧ ಅಣುಕು ಪ್ರದರ್ಶನದಂತಿತ್ತು ಎಂದು ಟೀಕಿಸಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.

ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಇದ್ದ ಪೊಲೀಸರೇ ಈಗಲೂ ಇದ್ದಾರೆ. ನಾವು ಹೊಸದಾಗಿ ಯಾರನ್ನು ನೇಮಿಸಿಲ್ಲ. ನಿಮ್ಮ ಹೇಳಿಕೆ ದುಷ್ಕರ್ಮಿಗಳಿಗೆ ಬೆಂಬಲ ಕೊಟ್ಟಂತಾಗಿತ್ತೆ. ಈ ರೀತಿ ಜನರಲ್ಲಿ ಭಾವನೆ ಬಂದಿದೆ ಎಂದು ಸಚಿವ ಕೆ,ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಹಾಸನದಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ. ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯ ತಡೆಯಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ಒಂದಾಗಬೇಕು. ಇಲ್ಲದಿದ್ರೆ ದುಷ್ಟಶಕ್ತಿಗೆ ಬೆಂಬಲ ಕೊಟ್ಟಂತಾಗುತ್ತೆ. ಹಿಂದೂ ಮುಸ್ಲೀಂ ಹೆಸರಲ್ಲಿ ಗಲಭೆ ಸೃಷ್ಟಿಸೋದು ಬೇಡ ಎಂದು ಸಲಹೆ ನೀಡಿದರು.

ಪೊಲೀಸರ ಮೇಲೆಯೇ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮಂಗಳೂರು ಗಲಭೆ ಬಗ್ಗೆ ಅವರಿಗೆ ಗೊತ್ತಿತ್ತು. ಆದರೂ ಪೊಲೀಸರ ಮೇಲೆಯೇ ಆರೋಪಿಸಿದರು. ಈಗ ಬಾಂಬ್ ವಿಚಾರದಲ್ಲೂ ಹೆಚ್.ಡಿ ಕೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

Key words: Former CM HD kumaraswamy – three parties –  Minister- KS Eshwarappa-hassan