ಯಾತ್ರೆಗೆ ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಸಿ.ಪಿ ಯೋಗೇಶ್ವರ್ ಗೆ ಮಾಜಿ ಸಿಎಂ ಹೆಚ್.ಡಿಕೆ ತಿರುಗೇಟು.

Promotion

ಮಂಡ್ಯ,ಡಿಸೆಂಬರ್,23,2022(www.justkannada.in):  ಪಂಚರತ್ನ ಯಾತ್ರೆಗೆ ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಗೆ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಾನು ಅಕ್ರಮವಾಗಿ ಹಣ ಸಂಪಾದಿಸಿಲ್ಲ,  ನಾನು ಈ ಕಾರ್ಯಕ್ರಮಕ್ಕೆ  ಒಂದು ನಯಾ ಪೈಸೆ ಕೊಟ್ಟಿಲ್ಲ. ಕಾರ್ಯಕರ್ತರು ಶಾಸಕರೇ ಹಣ ಖರ್ಚು ಮಾಡಿದ್ದಾರೆ ಎಂದರು.

ನಾಡಿನ ಜನತೆ ಪಂಚರತ್ನ ಯಾತ್ರೆ ಬಗ್ಗೆ ಮಾತನಾಡುತ್ತಿದ್ದಾರೆ. ಜನರು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರೈತರು, ಜನರು ಪಂಚರತ್ನಯಾತ್ರೆಗೆ  ಬೆಂಬಲ ನೀಡುತ್ತಿದ್ದಾರೆ. ನೀಡುತ್ತಿದ್ದಾರೆ ಎಂದು ಹೆಚ್.ಡಿಕೆ ತಿಳಿಸಿದರು.

Key words: Former CM- HD Kumaraswamy- CP Yogeshwar –pancharatna yatre