ದೇವೇಗೌಡರ ಉಗುರಿಗೂ ” ಶಾ” ಸಮವಲ್ಲ: ಎಚ್.ಡಿ ಕೆ.

ಮೈಸೂರು,ಜನವರಿ,2,2023(www.justkannada.in):  ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯದಲ್ಲಿ ಜೆಡಿಎಸ್ ವಿರುದ್ದ ಮಾತನಾಡಿದ್ದಾರೆ.  ಅಮಿತ್ ಶಾ ಅವರು ದೇವೇಗೌಡರ ಉಗುರಿಗೂ ಸಮವಲ್ಲ. ದೇವೇಗೌಡರಾಗಲೀ, ನಾನಾಗಲೀ ಸರ್ಕಾರದ ಹಣ ಲೂಟಿ ಮಾಡಿದ್ದಾರೆ ತೋರಿಸಿ.  ಒಂದೇ ಒಂದು ಉದಾಹರಣೆ ನೀಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್  ಶಾ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗುಡುಗಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಿರುವಾಗ ನೀವು ನಮ್ಮ ಬಗ್ಗೆ ಮಾತನಾಡುತ್ತೀರಿ.  ಜೆಡಿಎಸ್ ಜತೆ ಹೊಂದಾಣಿಕೆ ಇಲ್ಲ ಅಂತ ಹೇಳಿದ್ದೀರಿ.  ನಿಮ್ಮ ಮನೆ ಬಾಗಿಲಿಗೆ ಬಂದಿದ್ದೀನಾ ? ನನ್ನ ಪಕ್ಷ ಕಟ್ಟುತ್ತಿದ್ದೇನೆ.  ಯಾರು ನಿಮ್ಮ ಬಳಿ ಅರ್ಜಿ ಹಾಕಿಕೊಂಡು ಬಂದಿದ್ದೇವ ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಯಾವತ್ತು ನಿಮ್ಮ ಮನೆಗಳ ಬಾಗಿಲಿಗೆ ಬಂದಿಲ್ಲ. ನೀವೆ ನಮ್ಮ ಮನೆಯ ಬಾಗಿಲಿಗೆ ಬಂದಿರೋದು. ಎರಡು ರಾಷ್ಟ್ರೀಯ ಪಕ್ಷದಿಂದ ರಾಜ್ಯಕ್ಕೆ ಏನು ಆಗಿಲ್ಲ. ಇದರಿಂದಲೇ ನಾನು ಪಂಚರತ್ನ ಯೋಜನೆಗಾಗಿ ಹೊರಟಿದ್ದೇನೆ. ಮಂಡ್ಯಗೆ ನೀವೂ ಹತ್ತು ಬಾರಿ ಅಲ್ಲ, ನೂರು ಬಂದರು ಏನೂ ಆಗಲ್ಲ. ಮಂಡ್ಯ ಜಿಲ್ಲೆಗೆ ಏನು ಕೊಟ್ಟಿದ್ದೀರಾ? ಏರ್ಪೋರ್ಟ್ ಕೊಟ್ಟಿದ್ದೀರಾ.? ಬನ್ನಿ ಸಾರ್ವಜನಿಕವಾಗಿ ಬಹಿರಂಗ ಚರ್ಚೆ ಮಾಡೋಕೆ ಎಂದು ಅಮಿತ್ ಶಾಗೆ ಹೆಚ್.ಡಿಕೆ ಸವಾಲು ಎಸೆದರು.

ಮುಂದಿನ ಸಂಕ್ರಾಂತಿ ನಂತರ ಎರಡು ಪಟ್ಟಿ ಬಿಡುಗಡೆ ಮಾಡುತ್ತೇವೆ‌. ಮೈಸೂರಿನ‌ ನಾಲ್ಕೈದು ಕ್ಷೇತ್ರಗಳ ಪಟ್ಟಿ ಬಿಡುಗಡೆ ಸಂಬಂಧ ಪ್ರಮುಖರ ಸಭೆ ಕರೆದು ತೀರ್ಮಾನ ಮಾಡ್ತೇನೆ‌. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮಂಡ್ಯಕ್ಕೆ ಬಂದು ಜೆಡಿಎಸ್ ಬಗ್ಗೆ  ಸಾರ್ವಜನಿಕವಾಗಿ ಟೀಕೆ ಮಾಡಿದ್ದಾರೆ. ಮಂಡ್ಯದ ಸಭೆಯಲ್ಲಿ ಕರ್ನಾಟಕ ರಾಜ್ಯ ನಮ್ಮ‌ ಕುಟುಂಬದ ಎಟಿಎಂ ಎಂದಿದ್ದಾರೆ. ಯಾವುದಾದರೂ ಪ್ರಕರಣದಲ್ಲಿ ದೇವೇಗೌಡ ಅವರು ಪಿಎಂ ಆಗಿದ್ದಾಗ, ನಾನು ಸಿಎಂ ಆಗಿದ್ದಾಗ ಸರ್ಕಾರ ಖಜಾನೆ ಲೂಟಿ ಮಾಡಿದ್ರೆ ಒಂದೇ ಪ್ರಕರಣ ತೋರಿಸಲಿ. ಇಂದು ಬಿಜೆಪಿ ಲೂಟಿ ಮಾಡುತ್ತಿರೋದು ಎಲ್ಲರಿಗೂ ಗೊತ್ತಿದೆ. ಅಮಿತ್ ಶಾ ಅವರ ಮಗನಿಗೆ ಬಿಸಿಸಿಐ ಹುದ್ದೆ ಕೊಟ್ಟರು ಯಾವ ಆಧಾರದ ಮೇಲೆ ಕೊಟ್ರಿ. ಕೋರ್ಟ್ ಆದೇಶಗಳಾದ್ರೂ ಅದರೂ ಕೊಟ್ಟಿರಿ ಎಂದು ಹೆಚ್.ಡಿಕೆ ಪ್ರಶ್ನಿಸಿದರು.

ಜೆಡಿಎಸ್  ಪಕ್ಷ ಇದು ಕನ್ನಡಿಗರ, 6.5 ಕೋಟಿ ರೂ. ಕನ್ನಡಿಗರ ಎಟಿಎಂ. ಹೊಂದಾಣಿಕೆ ಮಾಡಿಕೊಳ್ಳಲು ನಾನು ಬಿಜೆಪಿ ಅವ್ರ ಮನೆ ಬಾಗಿಲಿದೆ ಹೋಗಿಲ್ಲ. ನಾನು ಅಮಿತ್ ಶಾ ಮನೆಗೆ ಹೋಗಿದ್ದಿನಾ. ಹೊಂದಾಣಿಕೆ ಬಗ್ಗೆ ಯಾಕೆ ಮಾತನಾಡ್ತೀರಿ. ನಾನು ಪಂಚರತ್ನ ಯಾತ್ರೆ ಮಾಡ್ತಿರೋದು ಯಾರ ಮನೆ ಬಾಗಿಲಿಗೂ ಹೋಗಲು ಅಲ್ಲ. ಮಾರ್ಚ್ 20 ರ ವರೆಗೆ ಪಂಚರತ್ನ ಯಾತ್ರೆ ಮಾಡ್ತಿದ್ದೇನೆ. ದೇಶದಲ್ಲಿ‌ 800ಕ್ಕೂ ಹೆಚ್ಚು ಶಾಸಕರನ್ನ ಖರೀದಿ ಮಾಡಿರುವ ಇತಿಹಾಸ ಇದ್ದರೆ ಅದು. ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಮಾಡಿದೆ. ಸಾಮರ್ಥ್ಯ ಇಲ್ಲದ ಕಡೆ ಖರೀದಿ ಮಾಡಲು ಈಗಾಗಲೇ ಬಿಜೆಪಿ ಹುನ್ನಾರ ನಡೆಸುತ್ತಿದೆ. ರಾಜ್ಯದಿಂದ ಬಿಜೆಪಿ ಪಕ್ಷವನ್ನು ಕಳುಹಿಸಲು ಜೆಡಿಎಸ್ ಪಣ ತೊಟ್ಟಿದೆ. ನನ್ನ ಪಕ್ಷವನ್ನು ಕೆಣಕಿದ್ದೀರಿ, ನಿಮ್ಮ ರಾಜಕಾರಣ ಉತ್ತರ ಭಾರತದಲ್ಲಿ ಇಟ್ಕೊಳ್ಳಿ, ಕರ್ನಾಟಕದಲ್ಲಿ ಅಲ್ಲ ಎಂದು ಕಿಡಿಕಾರಿದರು.

ಬಿಜೆಪಿಯವರು ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಶುರು ಮಾಡಿದ್ದಾರೆ.  ಬಿಜೆಪಿಯನ್ನು ರಾಜ್ಯದಿಂದ ಹೊರಗೆ ಕಳುಹಿಸಲು ಜೆಡಿಎಸ್ ತೀರ್ಮಾನ ಮಾಡಿದೆ.  ನನ್ನನ್ನು ಬ್ಲಾಕ್ ಮೇಲ್ ಪಾರ್ಟಿ ಅಂದಿದ್ದೀರಿ. ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಧಾನಿ ಭೇಟಿ ಮಾಡಿದೆ.  ಆಗ ರಾಜೀನಾಮೆ ಕೊಟ್ಟು ಹೊಸದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಅಂತ ಹೇಳಿದವರು ಯಾರು ?ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿ ಎಂದು ಗುಡುಗಿದರು.

ಚುನಾವಣೆ ವೇಳೆಯಲ್ಲಿ ಬಿಜೆಪಿಯಿಂದ ಇಡಿ, ಐಟಿ ಅಸ್ತ್ರ ಪ್ರಯೋಗ. ನಮ್ಮ ಮೇಲೆ ಐಟಿ ಇಡಿ  ಯಾವುದೆ ದಾಳಿ ನೆಡೆದರು ಸಿದ್ದ. ಈವರೆಗೂ ಬಿಜೆಪಿಯವರ  ಮೇಲೆ ಐಟಿ ದಾಳಿ ಮಾಡಿಲ್ಲ. ನಮ್ಮ ಮೇಲೆ ಐಟಿ ದಾಳಿ ಮಾಡಿದ್ರು ನಾವು ಹೆದರಲ್ಲ. ನಾವು ಸ್ವಚ್ಚವಾಗಿದ್ದೇವೆ ಸಿದ್ಧವಾಗಿದ್ದೇವೆ ಎಂದು ಹೆಚ್,ಡಿ ಕುಮಾರಸ್ವಾಮಿ ಕೇಂದ್ರ ಸಚಿವ ಅಮಿತ್ ಶಾಗೆ ಟಾಂಗ್ ನೀಡಿದರು.

Key words: Former CM-HD kumaraswamy- central minister-Amith sha-Former PM-HD Devegowda