ಮಾಜಿ ಸಿಎಂ ಬಿಎಸ್ ವೈ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಹಾರಿ ಬಂದ ಪ್ಲಾಸ್ಟಿಕ್ ಚೀಲಗಳು: ಕೆಲ ಕಾಲ ಆತಂಕ.

kannada t-shirts

ಕಲಬುರಗಿ,ಮಾರ್ಚ್,6,2023(www.justkannada.in): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದ ಹಿನ್ನೆಲೆ ಕೆಲಕಾಲ ಆತಂಕ ಸೃಷ್ಠಿಯಾಯಿತು.

ಜೇವರ್ಗಿಯಲ್ಲಿ ನಡೆಯುತ್ತಿರವ ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ಬಿಎಸ್ ಯಡಿಯೂರಪ್ಪ ಜೇವರ್ಗಿ ಆಗಮಿಸಿದ್ದರು. ಹೆಲಿಕಾಪ್ಟರ್​ ಮೂಲಕ ಬಂದ ಬಿಎಸ್​ ಯಡಿಯೂರಪ್ಪ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಹೆಲಿಪ್ಯಾಡ್​​ನಲ್ಲಿ ಹೆಲಿಕಾಪ್ಟರ್​ ಲ್ಯಾಂಡ್​​ ಆಗುವ ವೇಳೆ ಪ್ಲಾಸ್ಟಿಕ್ ಚೀಲಗಳು ಹಾರಿಬಂದಿವೆ. ತಕ್ಷಣ ಎಚ್ಚೆತ್ತ ಪೈಲೆಟ್‌ ಹೆಲಿಕಾಪ್ಟರ್​ನ್ನು ಲ್ಯಾಂಡ್​ ಮಾಡದೆ ಬೇರೆಡೆ ತೆಗೆದುಕೊಂಡು ಹೋಗಿದ್ದಾರೆ. ನಂತರ ಒಂದೆರಡು ಸುತ್ತು ಹೆಲಿಕಾಪ್ಟರ್ ಅನ್ನು ಆಕಾಶದಲ್ಲಿ ಹಾರಾಟ ನಡೆಸಿದ್ದಾರೆ. ಈ ವೇಳೆ ಪೊಲೀಸರು ಪ್ಲಾಸ್ಟಿಕ್ ಚೀಲಗಳನ್ನ ತೆರೆವುಗೊಳಿಸಿದ್ದಾರೆ. ಬಳಿಕ ಪೈಲೆಟ್ ಲ್ಯಾಂಡ್ ಮಾಡಿದ್ದಾರೆ. ಇದರಿಂದ ಕ್ಷಣಕಾಲ ಆತಂಕ ಸೃಷ್ಟಿಯಾಗಿತ್ತು.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಪೈಲೆಟ್ ಜೋಸೇಫ್, ಲ್ಯಾಂಡ್ ಆಗುವ ವೇಳೆ ಬ್ಯಾಗ್ ಸೇರಿದಂತೆ ಸುತ್ತಮುತ್ತ ಯಾವುದೇ ವಸ್ತುಗಳು ಇರಬಾರದು. ಆದರೆ ನಮಗೆ ಎಲ್ಲವೂ ತರಬೇತಿ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಹೇಳಿರುತ್ತಾರೆ. ಕೆಲ ಪ್ಲಾಸ್ಟಿಕ್ ಚೀಲ ಹಾರಿದ್ದರಿಂದ ಮೊದಲು ಲ್ಯಾಂಡ್ ಮಾಡಲಿಲ್ಲ. ಯಾವ ರೀತಿಯ ಲೋಪ ಆಗಿದೆ ಅಂತ ವಿಶುವಲ್ ​ನಲ್ಲಿಯೇ ಗೊತ್ತಾಗುತ್ತದೆ  ಎಂದಿದ್ದಾರೆ.

 

Key words: Former CM- BS Yeddyurappa- Plastic bags –helicopter- landing

website developers in mysore