ರಕ್ಷಣೆ ಮಾಡಿದ್ದ ಕರಡಿಯನ್ನ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ.

ಮೈಸೂರು,ಡಿಸೆಂಬರ್,25,2021(www.justkannada.in): ಕಾಫಿ ತೋಟದಲ್ಲಿ ಸೆರೆ ಸಿಕ್ಕಿದ್ದ ಕರಡಿಯನ್ನ ಅರಣ್ಯ ಇಲಾಖೆ ಸಿಬ್ಬಂದಿ  ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಅರಣ್ಯ ವ್ಯಾಪ್ತಿಯ ಕಲ್ಲಹಳ್ಳಿ ಬಳಿ ಕಾಡಿಗೆ ಬಿಟ್ಟಿದ್ದಾರೆ.

ನಾಗರಹೊಳೆ ಅರಣ್ಯ ಪ್ರದೇಶದ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕಾನೂರು ಗ್ರಾಮದಲ್ಲಿ ಡಿಸೆಂಬರ್ 23 ರಂದು ಕರಡಿಯನ್ನ ರಕ್ಷಣೆ ಮಾಡಲಾಗಿತ್ತು. ಕರಡಿ ಕಾಫಿ ತೋಟದ ತಂತಿ‌ ಬೇಲಿಗೆ ಸಿಲುಕಿತ್ತು. ಅರೆವಳಿಕೆ ಚುಚ್ಚುಮದ್ದು ನೀಡಿ ಕರಡಿಯ ರಕ್ಷಣೆ ಮಾಡಲಾಗಿತ್ತು.

ಕರಡಿಗೆ ಚಿಕಿತ್ಸೆ ನೀಡಿದ ನಂತರ ಚೇತರಿಕೆ ಕಂಡು ಬಂದಿದ್ದು ಈ ಹಿನ್ನೆಲೆಯಲ್ಲಿ ಕರಡಿಗೆ ಚಿಪ್ ಅಳವಡಿಸಿ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಬಿಟ್ಟಿದ್ದಾರೆ. ಬಿಟ್ಟ ತಕ್ಷಣ ಕ್ಯಾಮೆರಾದ ಕಡೆಗೆ ಓಡಿದ ಕರಡಿ‌. ಕ್ಯಾಮೆರಾಗೆ ಪೋಸ್ ನೀಡಿ ಕಾಡಿನ ಕಡೆಗೆ ಸಾಗಿತು.

Key words: forest guard -left – bear- jungle -hunsur