ಕಾಡಾನೆ ದಾಳಿಗೆ ಅಪಾರ ಪ್ರಮಾಣದ ರೈತರ  ಬೆಳೆ ನಾಶ: ಮೂಕ ಪ್ರೇಕ್ಷಕರಂತಾದ ಅರಣ್ಯಾಧಿಕಾರಿಗಳು…

ಮೈಸೂರು,ಅ,11,2019(www.justkannada.in):  ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತೂರು ಗ್ರಾಮದ ಅರಣ್ಯದಂಚಿನಲ್ಲಿ ಕಾಡಾನೆ ದಾಳಿಗೆ ರೈತರ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕು ಮುತ್ತೂರು ಗ್ರಾಮದಲ್ಲಿ ಆನೆ ದಾಳಿಯಿಂದ ರೈತರು ಕಂಗಾಲಾಗಿದ್ದು , ಆನೆ ಹಾವಳಿಯಿಂದ ಬೆಳೆ ನಾಶವಾಗಿ ನೂರಾರು ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ರೈತರ ಅಪಾರ ಪ್ರಮಾಣದ ಭತ್ತ, ರಾಗಿ ಶುಂಠಿ ಬೆಳೆ ನಾಶವಾಗಿದ್ದು, ಗ್ರಾಮದ ಅರಣ್ಯದಂಚಿನಲ್ಲಿ ಆನೆ ದಾಳಿ ತಪ್ಪಿಸಲು ಅವೈಜ್ಞಾನಿಕ ಆನೆ ಕಂದಕ ನಿರ್ಮಾಣ ಮಾಡಿದ್ದರೂ ಸಹ ಆನೆ ದಾಳಿ ಮುಂದುವರೆದಿದೆ.

ಕಾಡು ಪ್ರಾಣಿಗಳ ಉಪಟಳಕ್ಕೆ  ಬೇಸತ್ತ ರೈತರು ಮಾಧ್ಯಮದ ಮುಂದೆ   ತಮ್ಮ ಅಳಲು ತೋಡಿಕೊಂಡಿದ್ದಾರೆ.  ಆನೆರ ದಾಳಿಯಿಂದ ನೂರಾರು ಎಕರೆ ಬೆಳೆ ನಾಶವಾದರೂ ಅರಣ್ಯಾಧಿಕಾರಿಗಳು ಮಾತ್ರ ಮೂಕ ಪ್ರೇಕ್ಷಕರಂತೆ ಕೈ ಕಟ್ಟಿ ಕುಳಿತಿದ್ದಾರೆ ಎಂದು ರೈತರು ಕಿಡಿಕಾರಿದ್ದಾರೆ.

Key words:  forest –elephant-attack –farmers- crops-mysore