ಲಲಿತ ಮಹಲ್ ಮುಂಭಾಗ ಮರ ಕಡಿಯುವುದಕ್ಕೆ ಆಕ್ಷೇಪಣೆ ಆಹ್ವಾನಿಸಿದ ಅರಣ್ಯ ಇಲಾಖೆ: ಏ.23ಕ್ಕೆ ಸಾರ್ವಜನಿಕರ ಸಭೆ

kannada t-shirts

ಮೈಸೂರು, ಏಪ್ರಿಲ್ 13, 2021: ನಗರದ, ಲಲಿತ ಮಹಲ್ ಅರಮನೆಯ ಮುಂಭಾಗದ ಕುರುಬಾರಹಳ್ಳಿ ಸರ್ವೆ ನಂ.4ರ 4.00 ಎಕರೆ ಪ್ರದೇಶದಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಹೆಲಿಪ್ಯಾಡ್ ನಿರ್ಮಾಣ ಮಾಡಲು ಗುರುತಿಸಿರುವ ಜಾಗದಲ್ಲಿರುವ ವಿವಿಧ ಜಾತಿಯ 150 ಸಂಖ್ಯೆಯ (0.25 ಸೆ.ಮೀ’ ಮೇಲ್ಪಟ್ಟ ಸುತ್ತಳತೆಯುಳ್ಳ) ಮರಗಳನ್ನು ಕಡಿಯಲು ಉದ್ದೇಶಿಸಿದ್ದು, ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕರಣ 8(3) (VII) ರಡಿ 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದಲ್ಲಿ ಸಾರ್ವಜನಿಕ ಅಹವಾಲನ್ನು ಸ್ವೀಕರಿಸಿ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ದಿನಾಂಕ: 23-04-2021ರಂದು ಪೂರ್ವಾಹ್ನ 11.00 ಗಂಟೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಸಭಾಂಗಣ, ಮೈಸೂರು ವಿಭಾಗ, ಮೈಸೂರು ಇಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯಲಾಗಿದೆ.

ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಖುದ್ದಾಗಿ ಸಭೆಯಲ್ಲಿ ಹಾಜರಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಅಥವಾ ಸದರಿ ದಿನಾಂಕದ ಒಳಗಾಗಿ ವೃಕ್ಷಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಹಾಗೂ ಉ.ಅ.ಸಂ.ಗಳ ತಾಂತ್ರಿಕ ಸಹಾಯಕರು, ಮೈಸೂರು ವಿಭಾಗ, ಮೈಸೂರು ಇವರಿಗೆ ಲಿಖಿತ ರೂಪದಲ್ಲಿ ಆಕ್ಷೇಪಣೆಯನ್ನು ಸಲ್ಲಿಸಬಹುದು. ಅಲ್ಲದೇ ಈ ಕೆಳಗೆ ನೀಡಿರುವ ಇ-ಮೇಲ್ /ಅಂಚೆ ವಿಳಾಸಕ್ಕೆ ‘ ನಿಗಧಿತ ಸಮಯ ಹಾಗೂ ದಿನಾಂಕದೊಳಗೆ ಆಕ್ಷೇಪಣೆ ಸಲ್ಲಿಸಬಹುದು.

abe:-dcfmdm@gmail.com

ಅಂಚೆ ವಿಳಾಸ:- ವೃಕ್ಷಾಧಿಕಾರಿ ಹಾಗೂ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಮೈಸೂರು-570008

ಹಾಗೂ ಉ.ಅ.ಸಂ.ಗಳ ತಾಂತ್ರಿಕ ಸಹಾಯಕರು, ಮೈಸೂರು ವಿಭಾಗ, ಮೈಸೂರು.

ಅರಣ್ಯ ಭವನ, 1ನೇ ಮಹಡಿ, ಅಶೋಕಪುರಂ, 6ನೇ ಕ್ರಾಸ್,

 

website developers in mysore