ಡಿ.5 ರಂದು ಬಲವಂತದ ಬಂದ್ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ- ಸಿಎಂ ಬಿ.ಎಸ್ ಯಡಿಯೂರಪ್ಪ ಎಚ್ಚರಿಕೆ…

kannada t-shirts

ಬೆಂಗಳೂರು,ನವೆಂಬರ್,18,2020(www.justkannada.in): ಇಲ್ಲಿರುವ ಮರಾಠಿಗರು ಸಹ ನಮ್ಮ ಕನ್ನಡಿಗರೇ. ಅವರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ. ಹೀಗಾಗಿ ಡಿಸೆಂಬರ್ 5 ರಂದು ಬಂದ್ ಮಾಡುವ ಅಗತ್ಯವಿಲ್ಲ.  ಒಂದು ವೇಳೆ ಬಲವಂತದಿಂದ ಬಂದ್ ಮಾಡಿದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.kannada-journalist-media-fourth-estate-under-loss

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಿಎಸ್  ಯಡಿಯೂರಪ್ಪ, ಡಿಸೆಂಬರ್ 5 ರಂದು ಬಂದ್ ಮಾಡುವ ಅಗತ್ಯವಿಲ್ಲ. ಹೀಗಾಗಿ ಯಾರೂ ಕೂಡ ಕರ್ನಾಟಕ ಬಂದ್ ಗೆ ಕರೆ ನೀಡಬಾರದು. ಬಲವಂತದಿಂದ ಬಂದ್ ಮಾಡಿದರೇ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.forced-bandh-dec-5-action-cm-bs-yeddyurappa-warning

ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು ನವೆಂಬರ್ 27ರೊಳಗೆ ಪ್ರಾಧಿಕಾರ ರಚನೆ ನಿರ್ಧಾರ ಹಿಂಪಡೆಯದಿದ್ದರೇ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.

English summary….

CM BSY warns action against those who force for bundh on Dec. 5
Bengaluru, Nov. 18, 2020 (www.justkannada.in): Responding to several pro-kannada and other organisations who have called for a Karnataka bundh on December 5 following the State Govt.s orders to form Maratha Development Authority, Chief Minister B.S. Yedyurappa has warned to initiate action against those who force to observe bundh.forced-bandh-dec-5-action-cm-bs-yeddyurappa-warning
Several Pro-Kannada organisations have warned the State Government to observe a state wide bundh on December 5, if the government doesn’t withdraw its orders on forming the Maratha Development Authority.

Key words: Forced – bandh Dec 5- action-CM BS Yeddyurappa -Warning.

website developers in mysore