ಉದಾಸೀನ ಬೇಡ: ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡಿ- ಸುತ್ತೂರು ಶ್ರೀಗಳ ಕರೆ…

ಮೈಸೂರು ಮೇ,10,2021(www.justkannada.in):  ಕೋವಿಡ್-19 ವಿಚಾರದಲ್ಲಿ ಜನರು ಉದಾಸೀನ ಮಾಡಬಾರದು. ಸರ್ಕಾರದ ಸೂಚನೆಯನ್ನು ಪಾಲನೆ ಮಾಡಬೇಕು ಎಂದು ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರು ಹೇಳಿದರು.jk

ಸರ್ಕಾರ ಹಾಗೂ ಜಿಲ್ಲಾಡಳಿತದ ಮಾರ್ಗದರ್ಶನದಂತೆ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಆಕ್ಸಿಜನೇಟೆಡ್ ಹಾಸಿಗೆ ಹೆಚ್ಚಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಇತರ ಗಣ್ಯರೊಂದಿಗೆ ನಡೆದ ಸಭೆಯ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ನಿಯಂತ್ರಣ ಕ್ರಮಗಳನ್ನು ಮೀರಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಹೇಗೆ ನಿಯಂತ್ರಿಸುವುದು ಎಂಬುದು ದೇಶಕ್ಕೆ ದೊಡ್ಡ ಸವಾಲಾಗಿದೆ ಎಂದು ಶ್ರೀಗಳು ಹೇಳಿದರು.

ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಜಿಲ್ಲಾಡಳಿತದ ಮಾರ್ಗದರ್ಶನದಂತೆ ಎಲ್ಲಾ ಸೌಲಭ್ಯ ಕೊಡಲಾಗಿದೆ. 400 ಕ್ಕೂ ಹೆಚ್ಚು ಹಾಸಿಗೆ ನೀಡಲಾಗಿದೆ. ಈ ಪೈಕಿ ಸುಮಾರು 100 ಆಕ್ಸಿಜನೇಟೆಡ್ ಹಾಸಿಗೆಗಳಿವೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರ ಮತ್ತು ಸಂಸದರ ಹಾಗೂ ಶಾಸಕರ ಮನವಿ ಮೇರೆಗೆ ಮಾನವೀಯತೆಯ ದೃಷ್ಟಿಯಿಂದ ಒಂದೆರೆಡು ದಿನದಲ್ಲಿ ಇನ್ನೂ ನೂರು ಹೆಚ್ಚಿಸಲಾಗುವುದು, ಒಂದು ವಾರದಲ್ಲಿ ಆಕ್ಸಿಜನೇಟೆಡ್ ಹಾಸಿಗೆಗಳ ಸಂಖ್ಯೆಯನ್ನು 300 ಕ್ಕೆ ಹೆಚ್ಚಿಸಲಾಗುವುದು ಎಂದರು.follow-government-guidelines-dont-neglect-mysore-suttur-shri

ಲಿಕ್ವಿಡ್ ಆಕ್ಸಿಜನ್ ಘಟಕವನ್ನು ದ್ವಿಗುಣಗೊಳಿಸಲು ಏಜೆನ್ಸಿ ಸಂಪರ್ಕಿಸಿದ್ದೇವೆ. ಅದು ಸ್ಥಾಪನೆಯಾದರೆ ಕೇಂದ್ರದಿಂದ ನೇರವಾಗಿ ಆಕ್ಸಿಜನ್ ಪೂರೈಕೆ ಯಾಗುತ್ತದೆ ಎಂದರು.

ಅಗತ್ಯವಸ್ತುಗಳ ಖರೀದಿಗೆ ಅವಕಾಶ ಮಾಡಿದ ಅವಧಿಯಲ್ಲಿ ಜನರು ಮುಗಿಬೀಳುತ್ತಿದ್ದಾರೆ ಎಂಬ ವರದಿ ಬರುತ್ತಿದೆ. ಹಾಗಾಗಬಾರದು, ಗ್ರಾಮೀಣ ಮತ್ತು ನಗರ ಭಾಗದ ಜನರು ಕಳಕಳಿಯಿಂದ ವರ್ತಿಸುವ ಮೂಲಕ ಈ ಸೋಂಕು ನಿವಾರಣೆಗೆ ಸಹಕರಿಸಬೇಕು ಎಂದು ಹೇಳಿದರು.

Key words: follow– government –guidelines- Don’t Neglect-mysore-suttur shri