ಪ್ರವಾಹ, ಮಹಾಮಳೆಗೆ ನಲುಗಿದ ಜನರು: ಎಚ್.ಡಿ ಕೋಟೆ ತಾಲ್ಲೂಕಿನ ಬಹುತೇಕ ಸೇತುವೆಗಳು ಮುಳುಗಡೆ..

kannada t-shirts

ಮೈಸೂರು,ಆ,9,2019(www.justkannada.in):  ಕಳೆದ ಮೂರ್ನಾಲ್ಕು ದಿನಗಳಿಂದಲೂ ಮೈಸೂರು ಜಿಲ್ಲೆಯಲ್ಲೂ ವರುಣನ ಆರ್ಭಟ ಜೋರಾಗಿದ್ದು,  ಹೆಚ್.ಡಿ ಕೋಟೆ ತಾಲ್ಲೂಕಿನ ಬಹುತೇಕ ಸೇತುವೆಗಳು ಮುಳುಗಡೆಯಾಗಿವೆ.

ಒಂದಡೆ ಕಬಿನಿ ನದಿ ಭೋರ್ಗರೆದು ಹರಿಯುತ್ತಿದ್ದು, ಮತ್ತೊಂದೆಡೆ ತಾರಕ ಜಲಾಶಯದಿಂದ 15ಸಾವಿರ ಕ್ಯೂಸೆಕ್  ನೀರು ಬಿಡುಗಡೆ ಮಾಡಿರುವುದರಿಂದ ಎಚ್ ಡಿ ಕೋಟೆ ಬನಾಗದಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಮತ್ತೊಂದು ಕಡೆ ನುಗಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದ್ದು ಇದರಿಂದಾಗಿ ಬೀರ್ವಾಳು , ಮುಳ್ಳುರು ಭಾಗದಲ್ಲಿ  ಜನರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ.

ಭಾರಿ ಮಳೆಯಿಂದಾಗಿ ಎಚ್ ಡಿ  ಕೋಡೆ ತಾಲ್ಲೂಕಿನ ಬಹುತೇಕ ಸೇತುವೆಗಳು ಮುಳುಗಡೆಯಾಗಿದ್ದು, ಇಡೀ ತಾಲ್ಲೂಕಿನಾದ್ಯಂತ ಮಹಾ ಮಳೆಗೆ ಜನತೆ ನಲುಗಿದ್ದಾರೆ. ಎಚ್ ಡಿ ಕೋಟೆ  ರಸ್ತೆಯ ಹೈರಿಗೆ ಬಳಿ ಸೇತುವೆ ಜಲಾವೃತ ಎಚ್ ಡಿ ಕೋಟೆ- ಹೈರಿಗೆ ರಸ್ತೆ ಸಂಪರ್ಕ  ಕಡಿತವಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗು ನದಿ ಹಿನ್ನೋರಿನ ಪ್ರದೇಶ ಜಲಾವೃತವಾಗಿದ್ದು , ಮುತ್ತಿಗೆಹುಂಡಿ ಹಾಗೂ ಕುರ್ಣೇಗಾಲ ಸಂಪರ್ಕ ಸೇತುವೆ  ಮೇಲೂ ನೀರು ಉಕ್ಕಿ ಹರಿಯುತ್ತಿದೆ. ಭೀಕರ ಮಳೆಯನ್ನ ಕಂಡು ಗ್ರಾಮಸ್ಥರು ಕಂಗಾಲಾಗುದ್ದು ನೀರಿನ ರಭಸಕ್ಕೆ ರೈತರ ಬೆಳೆಗಳು ಕೊಚ್ಚಿಹೋಗಿದೆ.

ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ  ಮಚ್ಚೂರು ಗ್ರಾಮದ್ವೀಪದಂತೆ ಆಗಿದ್ದು ಜನರ ರಕ್ಷಣೆಗೆ ಅರಣ್ಯ ಸಿಬ್ಬಂದಿ ಮುಂದಾಗಿದ್ದಾರೆ. ಹೆಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ.ಆನೆಮಾಳ.ಮಚ್ಚೂರು ಬಾವಲಿ.ಮುಂತಾದ ಹತ್ತಾರು ಗ್ರಾಮಗಳು ನೀರಿನಲ್ಲಿ ಮುಗಿರುವುದು ನೋಡಬಹುದಾಗಿದೆ. ಮಚ್ಚೂರು ಗ್ರಾಮ ಭಾಗಸಹ ನೀರಿನಿಂದ ತುಂಬಿಕೊಂಡಿದೆ.

ನದೀ ಪಾತ್ರದ ಗ್ರಾಮಗಳಾದ ಕುರ್ಣೇಗಾಲ, ಕೊಡಗಿ, ಹೊಸಕೊಟೆ ಕಂದಲಿಕೆ ಮುತ್ತಿಗೆ ಚಿಕ್ಕತಳಲು , ಶಿವಪುರ ಗ್ರಾಮಗಳಲ್ಲಿ ಬೆಳೆ ಕೊಚ್ಚಿಹೋಗಿದ್ದು, ಅಪಾರ ಪ್ರಮಾಣದ ಹತ್ತಿ ತಂಬಾಕು ಬೆಳೆ ನಾಶವಾಗಿದೆ.

ಕೊಡಗು ಜಿಲ್ಲೆಯೂ ಸಹ  ಮಳೆರಾಯನ ಅಬ್ಬರ ಹೆಚ್ಚಾಗಿದ್ದು ಗುಹ್ಯ ಕಕ್ಕಟ್ಟುಕಾಡು ನದಿಯಲ್ಲಿ ಪ್ರವಾಹ ಉಂಟಾಗಿದೆ. ಇದರಿಂದಾಗಿ 6 ಮನೆಗಳು ನೆಲಸಮವಾಗಿದ್ದು ಹತ್ತಾರು ಮನೆಗಳು ಜಲಾವೃತವಾಗಿ ಕಕ್ಕಟ್ಟುಕಾಡು ದ್ವೀಪದಂತಾಗಿದೆ.

Key words: Floods- people-  Most – bridges – sunk- HD kote- Taluk

website developers in mysore