ರಾಜ್ಯದಲ್ಲಿ ಹಲವೆಡೆ ಪ್ರವಾಹ ಹಿನ್ನೆಲೆ: ಇನ್ಫೋಸಿಸ್ ಫೌಂಡೇಷನ್ ನಿಂದ ಸಿಎಂ ಪರಿಹಾರ ನಿಧಿಗೆ 10 ಕೋಟಿ  ನೆರವು ಘೋಷಣೆ…

Promotion

ಬೆಂಗಳೂರು,ಆ,8,2019(www.justkannada.in):  ರಾಜ್ಯದಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು,  ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡು ಬೀದಿಗೆ  ಬಿದ್ದಿದ್ದಾರೆ. ಇದೀಗ ಸಂತ್ರಸ್ತರ ನೆರವಿಗೆ ಇನ್ಫೋಸಿ್ ಫೌಂಡೇಶನ್ ಧಾವಿಸಿದೆ.

ಪ್ರವಾಹ ಪರಿಸ್ಥಿತಿಯಿಂದಾಗಿ ಮನೆ ಕಳೆದುಕೊಂಡು ಕಂಗಾಲಾಗಿರುವ ಜನರ ನೆರವಿಗೆ ಧಾವಿಸಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ. ಸುಧಾ ಮೂರ್ತಿ ಅವರು ಸಿಎಂ ಪರಿಹಾರ ನಿಧಿಗೆ 10 ಕೋಟಿ ರುಪಾಯಿ ದೇಣಿಗೆ ನೀಡವುದಾಗಿ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು  ಮಾಹಿತಿ ನೀಡಿದ್ದು ಸಿಎಂ ಪರಿಹಾರ ನಿಧಿಗೆ ಡಾ. ಸುಧಾಮೂರ್ತಿಯವರಿಂದ 10 ಕೋಟಿ ನೆರವು  ನೀಡಿದ್ದಾರೆಂದು ತಿಳಿಸಿದ್ದಾರೆ. ಹಾಗೆಯೇ ಪರಿಹಾರ ಕಾರ್ಯಕ್ಕೆ ಸುಮಾರು 5000 ಕೋಟಿಯಷ್ಟು ಬೇಕಾಗಿದ್ದು, ಪ್ರವಾಹದಿಂದ ಸಂತ್ರಸ್ಥರಾಗಿರುವವರಿಗೆ ನೆರವು ಮಾಡುವವರು ದಾನಿಗಳು ಮುಂದೆ ಬಂದು ದಾನ ಮಾಡಬಹುದಾಗಿದೆ  ಎಂದು ಸಿಎಂ ಬಿಎಸ್ ವೈ ಮನವಿ ಮಾಡಿದ್ದಾರೆ.

 

Key words: Flood –state-  Infosys Foundation -announces -Rs 10 crore- CM Relief Fund