ಮೈಸೂರು-ಬೆಳಗಾವಿ ನಡುವೆ ನೂತನ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ….

ಮೈಸೂರು,ಜ,17,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಿಂದ ಬೆಳಗಾವಿಗೆ ಇಂದಿನಿಂದ  ನೂತನ ವಿಮಾನ ಹಾರಾಟ ಸೇವೆಗೆ ಚಾಲನೆ ಸಿಕ್ಕಿದೆ.

ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿಯಲ್ಲಿ ಮೈಸೂರು- ಬೆಳಗಾವಿ ನಡುವೆ ನೂತನ ವಿಮಾನ ಹಾರಾಟಕ್ಕೆ ಇಂದು ಹಸಿರು ನಿಶಾನೆ ತೋರಲಾಯಿತು  ಮಧ್ಯಮ ವರ್ಗದ ಜನರ ಸೇವೆಗಾಗಿ ಕಡಿಮೆದರದಲ್ಲಿ ವಿಮಾನ ಪ್ರಯಾಣ ಸೇವೆ ಆರಂಭಿಸಲಾಗಿದೆ. ಈ ವಿಮಾನಸೇವೆ ಮೂಲಕ  ಕೇವಲ 900  ರೂಗಳಲ್ಲಿ ಮೈಸೂರಿನಿಂದ ಬೆಳಗಾವಿಗೆ ಪ್ರಯಾಣ ಮಾಡಬಹುದು.

ಈ ವಿಮಾನ ಕೇವಲ 1ಗಂಟೆ 20ನಿಮಿಷದಲ್ಲಿ ಬೆಳಗಾವಿ ತಲುಪಲಿದ್ದು  ವಾರದ 7ದಿನವೂ ಮೈಸೂರು ಹಾಗೂ ಬೆಳಗಾವಿ ನಡುವೆ ವಿಮಾನ ಸಂಚಾರ ಮಾಡಲಿದೆ.

Key words: flight – Mysore-Belgaum -travel