ಅನರ್ಹ ಶಾಸಕರಿಗೆ ಸಚಿವ ಸ್ಥಾನ ಫಿಕ್ಸ್: ಸುಳಿವು ನೀಡಿದ ಸಂಸದ ಶ್ರೀನಿವಾಸ ಪ್ರಸಾದ್….

ಮೈಸೂರು,ಆ,23,2019(www.justkannada.in): ರಾಜ್ಯ ಬಿಜೆಪಿ ಸರ್ಕಾರದಲ್ಲಿ ಅನರ್ಹ ಶಾಸಕರಿಗೆ ಸಚಿವ ಸ್ಥಾನ ಸಿಗುವುದು ಫಿಕ್ಸ್ ಆಗಿದೆ. ಹೌದು ಈ ಬಗ್ಗೆ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸುಳಿವು ನೀಡಿದ್ದಾರೆ.

ಸ್ವಯಿಚ್ಚೆಯಿಂದ ಬಂದಿರುವ 17 ಶಾಸಕರೂ ಈಗ ಮೂಲ ಬಿಜೆಪಿಗರೇ. ಮುಂದಿನ ಚುನಾವಣೆಯನ್ನು ಅವರು ಬಿಜೆಪಿ ಚಿಹ್ನೆಯಿಂದಲೇ ಎದುರಿಸಬೇಕು. ಹೀಗಾಗಿ ಮೂಲ ಅಥವಾ ವಲಸಿಗ ಬಿಜೆಪಿಗರು ಎಂದು ಬರುವುದಿಲ್ಲ. ಎಲ್ಲರೂ ಬಿಜೆಪಿಯವರೆ. ಅನರ್ಹರಾಗಿರುವ 17 ಜನರಿಗೂ ಮಂತ್ರಿ ಸ್ಥಾನ ಸಿಗಲಿದೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಶ್ರೀನಿವಾಸ್ ಪ್ರಸಾದ್ , ಸುಪ್ರೀಂ ಕೋರ್ಟ್ ತೀರ್ಪು ಬಂದ 10 ದಿನದಲ್ಲಿ ಅವರೆಲ್ಲರಿಗೂ ಮಂತ್ರಿ ಸ್ಥಾನ ಕೊಡಲಾಗುವುದು. ಈ ವಿಚಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಈಗ ಅರ್ಧ ಕ್ಯಾಬಿನೆಟ್ ರಚನೆಯಾಗಿದೆ..ಮುಂದಿನ ಹಂತದಲ್ಲಿ ಇನ್ನುಳಿದ ಸಚಿವ ಸ್ಥಾನಗಳಿಗೆ ನೇಮಕ ನಡೆಯಲಿದೆ.ಆ ಸಂದರ್ಭದಲ್ಲಿ ಅನರ್ಹ ಶಾಸಕರನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.

ಯಡಿಯೂರಪ್ಪ ಸಚಿವ ಸಂಪುಟ ಸಾಮಾಜಿಕ ಮತ್ತು ಪ್ರಾದೇಶಿಕ ಸಮತೋಲನದಿಂದ ಕೂಡಿಲ್ಲ ಎನ್ನುವ ಮಾತುಗಳಿವೆ. ಅದು ನಿಜವೂ ಕೂಡ ಹೌದು. ಮುಂದಿನ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಮೈಸೂರು ಭಾಗಗಕ್ಕೂ ಸಚಿವ ಸ್ಥಾನ ದೊರೆಯಲಿದೆ. ಮೂಲ ಅಥವಾ ವಲಸಿಗರ ಪೈಕಿ ಯಾರಿಗೆ ಎಂಬುದು ಮುಂದಿನ ಹಂತದಲ್ಲಿ ಗೊತ್ತಾಗಲಿದೆ. ಆ ಸಂದರ್ಭದಲ್ಲಿ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು. ಸಂಪುಟ ರಚನೆ ಸಂದರ್ಭದಲ್ಲಿ ಭಿನ್ನಮತ ಸಹಜ.ಯಡಿಯೂರಪ್ಪ ಅವರು ಸಂದಿಗ್ಧ ಪರಿಸ್ಥಿತಿಯಲ್ಲಿ ಇಲ್ಲಿದ್ದಾರೆ.  ಕಾನೂನು ಪ್ರಕಾರ ಸಂಪುಟ ರಚನೆಯಲ್ಲಿ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ಇದೆ. ಆದ್ರೇ ಯಡಿಯೂರಪ್ಪ ಈಗಿನ ಪರಿಸ್ಥಿತಿಯಲ್ಲಿ ಹೈಕಮಾಂಡ್ ಜೋತೆ ಚರ್ಚಿಸಿಯೇ ತೀರ್ಮಾನ ತೆಗೆದುಕೊಳ್ಳಬೇಕಿದೆಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.

ಪಿ. ಚಿದಂಬರಂ ಬಂಧನ ರಾಜಕೀಯ ದ್ವೇಷದಿಂದ ಕೂಡಿಲ್ಲ.

ಕೇಂದ್ರದ ಮಾಜಿ ಸಚಿವ ಚಿದಂಬರಂ ಬಂಧನ ವಿಚಾರ ಕುರಿತು ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್, ಚಿದಂಬರಂ ಬಂಧನ ರಾಜಕೀಯ ದ್ವೇಷದಿಂದ ಕೂಡಿದ್ದಲ್ಲ. ಅಂದು ಸಿಬಿಐ ಕಟ್ಟಡ ಉದ್ಘಾಟಿಸಿದ್ದ ಚಿದಂಬರಂ, ಇಂದು ಅದೇ ಕಟ್ಟಡದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಬದುಕಿನಲ್ಲಿ ಇಂತಹ ಸನ್ನಿವೇಶ ಸೃಷ್ಟಿಯಾಗುತ್ತವೆ. ಆದ್ರೆ ಈ ವಿಚಾರದಲ್ಲಿ ಇಡಿ, ಸಿಬಿಐ ಹಾಗೂ ಸುಪ್ರೀಂ ಕೋರ್ಟ್  ತಮ್ಮ ಕೆಲಸವನ್ನ ನಿರ್ವಹಿಸಿವೆ. ಇದರಲ್ಲಿ ಗೊತ್ತಾಗುತ್ತದೆ  ಯಾರು ದೊಡ್ಟವರಲ್ಲ. ಇದನ್ನೇ ಡಾ. ಅಂಬೇಡ್ಕರ್ ಕೂಡ ಹೇಳಿದ್ದು ಎಂದರು.

Key words: Fix – ministerial- position –disqualified MLA- MP Srinivasa Prasad